ಬ್ರಿಟಿಷ್ ಸಿಂಹಾಸನದ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಡ್ಯೂಕ್ ಆಫ್ ಕೇಂಬ್ರಿಡ್ಜ್ ಪ್ರಿನ್ಸ್ ವಿಲಿಯಂ, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡುತ್ತ ಏಷ್ಯಾ ಹಾಗೂ ಆಫ್ರಿಕಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಿನ್ಸ್ ಹಾಗೂ ಅವರ ಪತ್ನಿ ಡಚೆಸ್ ಆಫ್ ಕೇಂಬ್ರಿಡ್ಜ್ ಕೇಟ್ ಮಿಡಲ್ಟನ್ ಇಬ್ಬರು ಲಂಡನ್‌ನಲ್ಲಿರುವ ಉಕ್ರೇನಿಯನ್ ಸಾಂಸ್ಕೃತಿಕ ಕೇಂದ್ರಕ್ಕೆ ಭೇಟಿ ನೀಡಿದ್ದರು, ಈ ಸಂದರ್ಭದಲ್ಲಿ ವಿಲಿಯಂ ರೇಸಿಸ್ಟ್(ವರ್ಣಬೇಧ) ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.
ಯುದ್ಧ ಪೀಡಿತ ಉಕ್ರೇನ್‌ನಲ್ಲಿನ, ಜನರಿಗೆ ಮಾನವೀಯ ನೆರವಿನೊಂದಿಗೆ ಸಹಾಯ ಮಾಡುವ ಸ್ವಯಂಸೇವಕರನ್ನು ಭೇಟಿ ಮಾಡಿದ ಪ್ರಿನ್ಸ್ ವಿಲಿಯಂ, ಉಕ್ರೇನ್‌ಗೆ ತಮ್ಮ ಬೆಂಬಲದ ಹಸ್ತ ನೀಡಿದರು. ಈ ವೇಳೆ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ ಅವರು, ಬ್ರಿಟನ್ನರಿಗೆ ಆಫ್ರಿಕಾ ಮತ್ತು ಏಷ್ಯಾದಲ್ಲಿ ಸಂಘರ್ಷಗಳನ್ನು ನೋಡಿ ಅಭ್ಯಾಸವಿದೆ. ಆದರೆ ಈಗ ಯುರೋಪಿನಲ್ಲಿ ಯುದ್ಧವನ್ನು ನೋಡುತ್ತಿರುವುದು ಅನ್ಯಲೋಕದ(ಏಲಿಯನ್) ವಿಚಾರ ಎನಿಸುತ್ತಿದೆ ಎಂದಿದ್ದಾರೆ.
ಪ್ರಿನ್ಸ್ ಹ್ಯಾರಿ ಪತ್ನಿ ಮೇಘನ್ ಮಾರ್ಕೆಲ್ ಅವರನ್ನು ನಡೆಸಿಕೊಂಡ ಬಗ್ಗೆ ರಾಜಮನೆತನದ ಬಗ್ಗೆ ಸಾರ್ವಜನಿಕರಲ್ಲಿ ಈಗಾಗಲೇ ಸಾಕಷ್ಟು ಅಸಮಾಧಾನವಿದೆ. ಹೀಗಿರುವಾಗ ಪ್ರಿನ್ಸ್ ವಿಲಿಯಂ ನೀಡಿರುವ ಈ ಹೇಳಿಕೆ ಮತ್ತಷ್ಟು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾವಂತನಾದ ಪ್ರಿನ್ಸ್ ವಿಲಿಯಂ ಇಂತಹ ಅಜ್ಞಾನದ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸುತ್ತಿದೆ ಎಂದು ಬರಹಗಾರ ಆರ್‌ಎಸ್ ಲಾಕ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಮ್ಮೆ ಅಧಿಕಾರಕ್ಕೇರಿ ನೋಯ್ಡಾಗೆ ಅಂಟಿದ್ದ ಶಾಪ ಅಳಿಸಿ ಹಾಕಿದ ಯೋಗಿ ಆದಿತ್ಯನಾಥ್….!
ಪ್ರಪಂಚದಲ್ಲಿ ವಸಾಹತುಶಾಹಿ ಆಡಳಿತ ಶುರುಮಾಡಿ ಅತಿಹೆಚ್ಚು ರಕ್ತಸಿಕ್ತ ಆಡಳಿತ ನೀಡಿದ ಬ್ರಿಟನ್ ರಾಜಮನೆತನದವರು ಈ ರೀತಿ ಹೇಳಿಕೆ ನೀಡುವುದು ವಿಪರ್ಯಾಸ. ರಾಜಮನೆತನದ ಇತಿಹಾಸ ಎಲ್ಲರಿಗು ತಿಳಿದಿದೆ ಎಂದು ನೆಟ್ಟಿಗರು ಆಕ್ರೋಶಭರಿತ ಟ್ವೀಟ್ ಮಾಡಿದ್ದಾರೆ.
BNC ನ್ಯೂಸ್ ವರದಿಗಾರ ಆಸ್ಟ್ರಿಡ್ ಮಾರ್ಟಿನೆಜ್ ಸಹ ಇದರ ಬಗ್ಗೆ ಟ್ವೀಟ್ ಮಾಡಿ, ಇತ್ತೀಚಿನ ಇತಿಹಾಸದಲ್ಲಿ ಬೋಸ್ನಿಯಾದಲ್ಲಿ ರಕ್ತಸಿಕ್ತ ಸಂಘರ್ಷದ ಜೊತೆಗೆ ಯುರೋಪಿಯನ್ ವಸಾಹತುಶಾಹಿಯಿಂದಾಗಿ ಪ್ರಪಂಚದಾದ್ಯಂತ ಉಂಟಾಗಿದ್ದ ಹಿಂಸಾಚಾರದ ಬಗ್ಗೆ ಪ್ರಿನ್ಸ್ ವಿಲಿಯಂಗೆ ತ್ವರಿತವಾಗಿ ನೆನಪಿಸಿದ್ದಾರೆ.
ಯುಪಿಯಲ್ಲಿ ಮಹಿಳೆಯರು ಬಿಜೆಪಿಗೆ ವೋಟ್ ಮಾಡಿದ್ದರೆ ಪುರುಷರು ಎಸ್.ಪಿ. ಗೆ; ಚಂದ್ರಕಾಂತ್ ಪಾಟೀಲ್ ಹೇಳಿಕೆ
ವಸಾಹತುಶಾಹಿಯ 1000 ವರ್ಷಗಳ ಸುದೀರ್ಘ ಇತಿಹಾಸ, ಯುದ್ಧಗಳು ಮತ್ತು ನರಮೇಧಗಳ ಸುದೀರ್ಘ ಪಟ್ಟಿಯನ್ನು ಹೊಂದಿರುವ ರಾಜಮನೆತನದ ಸದಸ್ಯರು ಇಂತಹ ಹೇಳಿಕೆಯನ್ನು ಹೇಗೆ ನೀಡಬಹುದು ಎಂದು ಮಾನವ ಹಕ್ಕುಗಳ ವಕೀಲ ಖಾಸಿಮ್ ರಶೀದ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.