alex Certify ರಷ್ಯಾದ ಸೇನೆಗೆ ದಾರಿ ತಪ್ಪಿಸಲು ಈ ರೀತಿಯಾಗಿ ಮಾಸ್ಟರ್​ ಪ್ಲಾನ್​ ಮಾಡಿದ ಉಕ್ರೇನಿಯನ್​ ಸೇನೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾದ ಸೇನೆಗೆ ದಾರಿ ತಪ್ಪಿಸಲು ಈ ರೀತಿಯಾಗಿ ಮಾಸ್ಟರ್​ ಪ್ಲಾನ್​ ಮಾಡಿದ ಉಕ್ರೇನಿಯನ್​ ಸೇನೆ…..!

ಫೆಬ್ರವರಿ 24ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ನ ವಿರುದ್ಧ ಯುದ್ಧ ಘೋಷಣೆಯನ್ನು ಮಾಡಿದ್ದ ಸಂದರ್ಭದಲ್ಲಿ ಉಕ್ರೇನ್​ನ ಎಂಪಿ ವೊಲೊಡಿಮಿರ್​ ಅರಿವ್​ ಉಕ್ರೇನ್​ ತನ್ನ ದೇಶವನ್ನು ರಕ್ಷಿಸಿಕೊಳ್ಳಲು ಎಲ್ಲವನ್ನೂ ಮಾಡುತ್ತದೆ ಎಂದು ಹೇಳಿದ್ದರು. ಅಲ್ಲದೇ ರಷ್ಯಾದ ಮಿಲಿಟರಿ ಪಡೆಗಳಿಗೆ ನರಕಕ್ಕೆ ಸುಸ್ವಾಗತ ಎಂದೂ ಹೇಳಿದ್ದರು. ರಷ್ಯಾಗಿಂತ ಕಡಿಮೆ ಸೇನಾಬಲವನ್ನು ಹೊಂದಿದ್ದರೂ ಸಹ ತನ್ನ ಪ್ರಯತ್ನವನ್ನು ಬಿಡದ ಉಕ್ರೇನ್​ ರಷ್ಯಾದ ಸೇನೆಗೆ ನರಕದ ಹಾದಿಯನ್ನು ಸಾಧ್ಯವಾದಷ್ಟು ತೋರಿಸಲು ಪ್ರಯತ್ನಿಸುತ್ತಿದೆ.

ಉಕ್ರೇನ್​ ಮೇಲಿನ ರಷ್ಯಾದ ಆಕ್ರಮಣವನ್ನು ಆದಷ್ಟು ವಿಳಂಬಗೊಳಿಸಲು ಹಾಗೂ ರಷ್ಯಾದವರನ್ನು ಅವಹೇಳನ ಮಾಡುವ ಸಲುವಾಗಿ ರಸ್ತೆಯ ಸಂಕೇತಗಳು ಇರಬೇಕಾದ ಜಾಗಗಳಲ್ಲಿ Go F*** Yourselves ಎಂದು ಅವಾಚ್ಯ ಶಬ್ದಗಳನ್ನು ಬರೆಯಲಾಗಿದೆ.

ಉಕ್ರೇನಿಯನ್​ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಉಕ್ರಾವ್ಟೋಡರ್​​ ಫೇಸ್​ಬುಕ್​ ಪೋಸ್ಟ್​ಗಳಲ್ಲಿ ದೇಶದ ರಸ್ತೆಯ ಚಿಹ್ನೆಗಳನ್ನು ಕಿತ್ತು ಹಾಕುವುದು ಮೊದಲ ಆದ್ಯತೆ ಎಂದು ಹೇಳಿದೆ. ಶತ್ರುಗಳು ಕರುಣಾಜನಕ ಸ್ಥಿತಿಯನ್ನು ತಲುಪಬೇಕು. ಅವರು ನೇರವಾಗಿ ನರಕಕ್ಕೆ ಹೋಗಲು ಸಹಾಯ ಮಾಡೋಣ ಎಂದು ಬರೆಯಲಾಗಿದೆ. ಅಲ್ಲದೇ ಫೇಸ್​​ಬುಕ್​ನಲ್ಲಿ ಪೋಸ್ಟ್​ ಮಾಡಲಾದ ರಸ್ತೆಯ ಚಿಹ್ನೆಗಳ ಫೋಟೋಗಳಲ್ಲಿ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿರುವುದನ್ನು ಕಾಣಬಹುದಾಗಿದೆ.

ರಷ್ಯಾದ ಸೇನೆಯನ್ನು ಗೊಂದಲಕ್ಕೊಳಪಡಿಸಲು ಉಕ್ರೇನ್​ನ ಸೈನಿಕರು ರಸ್ತೆ ಚಿಹ್ನೆಗಳು ಹಾಗೂ ದಿಕ್ಕುಗಳು ಇದ್ದ ಫಲಕಗಳನ್ನು ಕಿತ್ತು ಹಾಕುತ್ತಿದ್ದಾರೆ. ಅಲ್ಲದೇ ಈ ಜಾಗಗಳಲ್ಲಿ ರಷ್ಯಾದ ಸೇನೆಯನ್ನು ಅವಾಚ್ಯವಾಗಿ ನಿಂದಿಸುವಂತಹ ಬೋರ್ಡ್​ಗಳನ್ನು ಹಾಕಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Získajte užitočné tipy a triky pre každodenný život, skvelé recepty a užitočné články o záhradkárstve. Objavte nové spôsoby, ako využiť svoj čas a zlepšiť svoj životný štýl s našimi informáciami. Buďte pripravení na všetky výzvy, ktoré vám prinesie každý deň a naučte sa, ako si uľahčiť každodenné povinnosti. So všetkými našimi tipmi budete mať vždy pod kontrolou svoj domáci a záhradkársky život. Nezabudnuteľná zmrzlinová výzva: len niektorí Vyhľadávanie ihly v kopy sena: Neúprosná úloha Nájdi myš za 8 sekúnd: hádanka pre ľudí s Len géniové by našli mačku za 8 sekúnd: najlepší 'Rozlúštenie hádanky: Nájsť lano priviazané k psovi za 8 Rýchly génius: Hľadanie „divného“ Obľúbené lifestylové tipy, kuchárske triky a užitočné články o záhradkárskej téme - to všetko nájdete na našej stránke plnej užitočných informácií. Urobte si život jednoduchším pomocou našich tipov a trikov, objavte nové recepty a naučte sa nové veci o pestovaní zeleniny na vašej záhrade. Buďte informovaní a inšpirovaní s naším obsahom!