ರಷ್ಯಾದ ವೋಡ್ಕಾಗೆ ಬಹಿಷ್ಕಾರ: ಚರಂಡಿಗೆ ಸುರಿಯುತ್ತಿದ್ದಾರೆ ಜನ…! 01-03-2022 8:06AM IST / No Comments / Posted In: Latest News, Live News, International ಉಕ್ರೇನ್ ವಿರುದ್ಧ ಯುದ್ಧದಲ್ಲಿ ತೊಡಗಿರುವ ರಷ್ಯಾದ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ವೋಡ್ಕಾವನ್ನು ಬಹಿಷ್ಕರಿಸುವ ಕರೆಗೆ ಕಾರಣವಾಗಿದೆ. ಓಹಿಯೋ, ಉತಾಹ್ ಮತ್ತು ನ್ಯೂ ಹ್ಯಾಂಪ್‌ಶೈರ್‌ನ ಅಧಿಕಾರಿಗಳು ರಷ್ಯಾ ತಯಾರಿಕೆ ಮಾಡುವ ಉತ್ಪನ್ನವನ್ನು ತೆಗೆದುಹಾಕುವಂತೆ ಮದ್ಯದ ಅಂಗಡಿಗಳಿಗೆ ಕರೆ ನೀಡಿದ್ದಾರೆ. ಉತಾಹ್ ಗವರ್ನರ್ ಸ್ಪೆನ್ಸರ್ ಕಾಕ್ಸ್, ಎಲ್ಲಾ ರಷ್ಯಾದ ಉತ್ಪನ್ನಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅವರು ಕರೆದಿದ್ದಾರೆ. ಉಕ್ರೇನ್‌ಗೆ ಬೆಂಬಲವನ್ನು ಸೂಚಿಸುವ ಸಲುವಾಗಿ ಬಾರ್ ಮಾಲೀಕರು ರಷ್ಯಾದ ವೋಡ್ಕಾವನ್ನು ಚರಂಡಿಗೆ ಸುರಿಯುತ್ತಿರುವುದನ್ನು ತೋರಿಸುವ ವಿಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಲಾಸ್ ವೇಗಾಸ್‌ನ ಎವೆಲ್ ಪೈನಲ್ಲಿ ಮದ್ಯಪ್ರಿಯರು ವೊಡ್ಕಾ ಬಾಟಲಿಯನ್ನು ಖರೀದಿಸಲು 300 ಡಾಲರ್ ಪಾವತಿಸಿದ್ದು, ನಂತರ ಚರಂಡಿಗೆ ಸುರಿಯಲಾಗಿದೆ. ರಷ್ಯಾದ ವೋಡ್ಕಾಕ್ಕೆ ಬಹಿಷ್ಕಾರವು ಎಂಬ ಹ್ಯಾಷ್ ಟ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್‌ಗೆ ಕಾರಣವಾಗಿದೆ. ಇನ್ನು ಕೆನಡಾದಲ್ಲಿ, ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾದ ಒಂಟಾರಿಯೊದ ಮದ್ಯ ನಿಯಂತ್ರಣ ಮಂಡಳಿಯು, ತನ್ನ 600 ಕ್ಕೂ ಹೆಚ್ಚು ಮಳಿಗೆಗಳಿಂದ ರಷ್ಯಾದಲ್ಲಿ ಉತ್ಪಾದಿಸಲಾದ ಎಲ್ಲಾ ಉತ್ಪನ್ನಗಳನ್ನು ತೆಗೆದುಹಾಕುವುದಾಗಿ ಶುಕ್ರವಾರ ಘೋಷಿಸಿದೆ. ಮ್ಯಾನಿಟೋಬಾ ಮತ್ತು ನ್ಯೂಫೌಂಡ್‌ಲ್ಯಾಂಡ್ ಪ್ರಾಂತ್ಯಗಳಲ್ಲಿ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವರದಿ ತಿಳಿಸಿದೆ. Today I directed @OhioCommerce to cease both the purchase & sale of all vodka made by Russian Standard, the only overseas, Russian-owned distillery with vodka sold in Ohio. Russian Standard's vodka is sold under the brand names of Green Mark Vodka & Russian Standard Vodka. — Governor Mike DeWine (@GovMikeDeWine) February 26, 2022