
ಈ ಸಂಬಂಧ ಟ್ವೀಟ್ ಮಾಡಿರುವ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ವಿರುದ್ಧ ಹೋರಾಡಲು ಇಚ್ಛಿಸುವ ದೇಶದ ಯಾವುದೇ ವ್ಯಕ್ತಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲು ತಾವು ಸಿದ್ಧ ಎಂದು ಹೇಳಿದ್ದಾರೆ. ಅಲ್ಲದೇ ಉಕ್ರೇನ್ನನ್ನು ರಕ್ಷಿಸಲು ಸಿದ್ಧರಾಗಿ ಎಂದು ನಾಗರಿಕರಿಗೆ ಕರೆ ನೀಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ಪ್ರಾದೇಶಿಕ ರಕ್ಷಣೆಯ ಭಾಗವಾಗಿ ದೇಶದ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವ ಯಾವುದೇ ನಾಗರಿಕರ ವಿರುದ್ಧ ತಮ್ಮ ಸರ್ಕಾರವು ನಿರ್ಬಂಧಗಳನ್ನು ತೆಗೆದುಹಾಕುತ್ತದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಇದಕ್ಕೂ ಮೊದಲು, ಉಕ್ರೇನ್ ರಷ್ಯಾದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿತ್ತು. ಉಕ್ರೇನ್‌ನ ಬಹುತೇಕ ಎಲ್ಲಾ ಪ್ರಮುಖ ನಗರಗಳು ಈಗ ರಷ್ಯಾದ ಬೃಹತ್ ದಾಳಿಗೆ ಒಳಗಾಗಿವೆ. ಆದರೆ ರಷ್ಯಾ ಮಾತ್ರ ತಾನು ಮಿಲಿಟರಿ ಹಾಗೂ ವಾಯುನೆಲೆಗಳ ಮೇಲೆ ಮಾತ್ರ ದಾಳಿ ಮಾಡಿದ್ದೇವೆ. ನಾಗರಿಕರನ್ನು ಗುರಿಯಾಗಿಸಿಲ್ಲ ಎಂದು ಹೇಳಿಕೊಂಡಿದೆ.