alex Certify ರಷ್ಯಾದ ನಾಲ್ವರು ಅತಿ ಸಿರಿವಂತರ ಆಸ್ತಿಗೆ ಸಮ ಮುಖೇಶ್​ ಅಂಬಾನಿ ಸಂಪತ್ತು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾದ ನಾಲ್ವರು ಅತಿ ಸಿರಿವಂತರ ಆಸ್ತಿಗೆ ಸಮ ಮುಖೇಶ್​ ಅಂಬಾನಿ ಸಂಪತ್ತು..!

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್​ ಅಂಬಾನಿ ಪ್ರಸ್ತುತ 89.9 ಬಿಲಿಯನ್​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದು ರಷ್ಯಾದ ನಾಲ್ವರು ಶ್ರೀಮಂತರ ಒಟ್ಟು ಸಂಪತ್ತಿಗೆ ಸಮನಾಗಿದೆ ಎಂದು ಬ್ಲೂಮ್​​ಬರ್ಗ್​ ಬಿಲಿಯೇನರ್ಸ್​ ಇಂಡೆಕ್ಸ್ ಹೇಳಿದೆ.

ಪ್ರಸ್ತುತ ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿರುವ ಅಂಬಾನಿ ರಿಲಯನ್ಸ್​ ಎಂಬ ದೈತ್ಯ ಕಂಪನಿಯ ಮಾಲೀಕರಾಗಿದ್ದಾರೆ. ವಿಶ್ವದ ಅತೀ ದೊಡ್ಡ ತೈಲ ಸಂಸ್ಕರಣಾ ಸಂಕೀರ್ಣ ರಿಲಯನ್ಸ್​ ಇಂಡಸ್ಟ್ರೀಸ್​ ಹಾಗೂ 4 ಜಿ ವೈರ್​ಲೆಸ್​ ನೆಟ್​ವರ್ಕ್ ಸೇರಿದಂತೆ ಸಾಕಷ್ಟು ಉದ್ಯಮಗಳನ್ನು ಮುಖೇಶ್​ ಹೊಂದಿದ್ದಾರೆ.

ರಷ್ಯಾದ ಶ್ರೀಮಂತ ವ್ಯಕ್ತಿ ವ್ಲಾಡಿಮಿರ್ ಪೊಟಾನಿನ್​ 25.2 ಬಿಲಿಯನ್​​ ಅಮೆರಿಕ ಡಾಲರ್​​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇವರು ಸರಕು ವ್ಯವಹಾರವನ್ನು ನಡೆಸುತ್ತಾರೆ. ಇದರ ಜೊತೆಯಲ್ಲಿ ಫಾರ್ಮಾ ಕಂಪನಿ ಪೆಟ್ರೋವ್ಯಾಕ್ಸ್​ ಫರ್ಮ್ ಹಾಗೂ ಸೋಚಿ ಬಳಿ ಇರುವ ಸ್ಕೀ ರೆಸಾರ್ಟ್​ ರೋಸಾ ಖುಟೇರ್​ನಲ್ಲಿ ತಮ್ಮ ಪಾಲನ್ನು ಹೊಂದಿದ್ದಾರೆ.

ಇನ್ನುಳಿದಂತರ ರಷ್ಯಾದ ಸೆವರ್ಸ್ಟಲ್​ ಮಾಜಿ ಸಿಇಓ ಅಲೆಕ್ಸಿ ವೋರ್ಡಾಶೋವ್​ ಹಾಗೂ ನೈಸರ್ಗಿಕ ಅನಿಲ ಸಂಸ್ಥೆ ನೊವಾಟೆಕ್​ ಸಂಸ್ಥಾಪಕ ಲಿಯೊನೆಡ್​ ಮಿಖೆಲ್ಸನ್​ ತಲಾ 22 ಬಿಲಿಯನ್ ಡಾಲರ್​ ಯುಎಸ್​ಡಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ರಷ್ಯಾದ ನಾಲ್ಕನೇ ಶ್ರೀಮಂತ ವ್ಯಕ್ತಿ ಎನ್​ಎಲ್​ಎಂಕೆ ಗ್ರೂಪ್​ ಅಧ್ಯಕ್ಷ ವ್ಲಾಡಿಮಿರ್ ಲಿಸಿನ್​ 21.2 ಬಿಲಿಯನ್​ ಡಾಲರ್​ ಸಂಪತ್ತನ್ನು ಹೊಂದಿದ್ದಾರೆ. ಶ್ರೀಮಂತ ರಷ್ಯನ್ನರ ಪಟ್ಟಿಯಲ್ಲಿ ನಾಲ್ಕನೆಯವರು NLMK ಗ್ರೂಪ್ ಅಧ್ಯಕ್ಷ ವ್ಲಾಡಿಮಿರ್ ಲಿಸಿನ್, USD 21.2 ಬಿಲಿಯನ್ ಸಂಪತ್ತನ್ನು ಹೊಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...