ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಣೆ ಮಾಡಿ ಏಳನೇ ದಿನಕ್ಕೆ ಕಾಲಿಟ್ಟರೂ ಸಹ ಧೈರ್ಯ ಕಳೆದುಕೊಳ್ಳದ ಉಕ್ರೇನ್ ಸೇನೆ ದೈತ್ಯ ರಾಷ್ಟ್ರದ ವಿರುದ್ಧ ಕೆಚ್ಚೆದೆಯ ಹೋರಾಟವನ್ನು ಮಾಡುತ್ತಿದೆ.
ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವಿಡಿಯೋದಲ್ಲಿ, ಉಕ್ರೇನ್ನ ನಾಗರಿಕರು ಜೀವದ ಹಂಗನ್ನು ತೊರೆದು ರಷ್ಯಾದ ಟ್ಯಾಂಕ್‌ಗಳ ಮೇಲೆ ಏರುತ್ತಿರುವುದು ಉಕ್ರೇನ್ ಜನತೆಯ ದಿಟ್ಟತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಚೆರ್ನಿಹಿವ್ ಪ್ರದೇಶದ ಬಖ್ಮಾಚ್ ನಗರದ ಮೂಲಕ ಹಾದುಹೋಗಲು ಪ್ರಯತ್ನಿಸುತ್ತಿರುವ ಶತ್ರು ಟ್ಯಾಂಕ್‌ಗಳ ಮೇಲೆ ಏರುವ ಮೂಲಕ ಉಕ್ರೇನಿಯನ್ ನಾಗರಿಕರು ರಷ್ಯಾದ ಮುನ್ನಡೆಯನ್ನು ನಿಧಾನಗೊಳಿಸುತ್ತಾರೆ. ಉಕ್ರೇನಿಯನ್ ಜನರ ಶೌರ್ಯವು ಅಪ್ರತಿಮವಾಗಿದೆ ಎಂದು ವಿಸೆಗ್ರಾಡ್ ಟ್ವೀಟ್ ಮಾಡಿದೆ.
ಇದೇ ರೀತಿ ಮತ್ತೊಂದು ವಿಡಿಯೋದಲ್ಲಿ ಉಕ್ರೇನ್ನ ವ್ಯಕ್ತಿಯೊಬ್ಬರು ರಷ್ಯಾದ ಮಿಲಿಟರಿ ಬೆಂಗಾವಲು ಪಡೆಯ ಎದುರು ನಿಂತು ಅವರನ್ನು ತಡೆಯಲು ಯತ್ನಿಸುತ್ತಿರುವುದು ಕೂಡ ಉಕ್ರೇನ್ ಪ್ರಜೆಗಳ ಧೈರ್ಯಕ್ಕೆ ಮತ್ತೊಂದು ಸಾಕ್ಷಿ ಎಂಬತಿದೆ.