
ಉಕ್ರೇನ್‌ನ ಖಾರ್ಕಿವ್‌ನಲ್ಲಿರುವ ಆಡಳಿತಾತ್ಮಕ ಕಟ್ಟಡಕ್ಕೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಕಟ್ಟಡ ಹೊತ್ತಿ ಉರಿದಿದೆ. ಈ ವಿಡಿಯೋವನ್ನು ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಂಚಿಕೊಂಡಿದೆ.
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನು ಉಲ್ಲಂಘಿಸಿ ರಷ್ಯಾ ಯುದ್ಧ ನಡೆಸುತ್ತಿದೆ. ನಾಗರಿಕರನ್ನು ಕೊಲ್ಲುತ್ತಿದ್ದು, ನಾಗರಿಕ ಮೂಲಸೌಕರ್ಯಗಳನ್ನು ನಾಶಪಡಿಸುತ್ತಿದೆ. ದೊಡ್ಡ ನಗರಗಳು ರಷ್ಯಾದ ಮುಖ್ಯ ಗುರಿಯಾಗಿದ್ದು, ಕ್ಷಿಪಣಿ ದಾಳಿ ನಡೆಸಲಾಗುತ್ತಿದೆ.
ಉಕ್ರೇನಿಯನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೊ ಕುಲೆಬಾ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಷ್ಯಾದ ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳ ಮೈಲುಗಳಷ್ಟು ಉದ್ದದ ಬೆಂಗಾವಲು ಉಕ್ರೇನಿಯನ್ ರಾಜಧಾನಿಗೆ ಹತ್ತಿರದಲ್ಲಿದೆ. ಜೊತೆಗೆ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಂದಹಾಗೆ, ಉಕ್ರೇನ್‌ನಾದ್ಯಂತದ ನಾಗರಿಕರು ಭೂಗತ ಸುರಂಗಮಾರ್ಗ ನಿಲ್ದಾಣಗಳು, ನೆಲಮಾಳಿಗೆಗಳು ಮತ್ತು ಇತರ ಆಶ್ರಯಗಳಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ.