alex Certify ರಷ್ಯಾದ ಎರಡು ಪ್ರಮುಖ ಚಾನೆಲ್​​ಗಳಿಗೆ ಯುಟ್ಯೂಬ್​ನಿಂದ ಕೊಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾದ ಎರಡು ಪ್ರಮುಖ ಚಾನೆಲ್​​ಗಳಿಗೆ ಯುಟ್ಯೂಬ್​ನಿಂದ ಕೊಕ್​..!

ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧವನ್ನು ಗಮನದಲ್ಲಿಟ್ಟುಕೊಂಡು ಯುರೋಪ್​ನಲ್ಲಿ ರಷ್ಯಾದ ಚಾನೆಲ್​ಗಳಾದ ಆರ್​ಟಿ ಹಾಗೂ ಸ್ಪುಟ್ನಿಕ್​ನ್ನು ಯುಟ್ಯೂಬ್​ನಿಂದ ನಿರ್ಬಂಧಿಸಲಾಗಿದೆ ಎಂದು ವಿಡಿಯೋ ಶೇರಿಂಗ್​ ವೇದಿಕೆಯು ಅಧಿಕೃತ ಮಾಹಿತಿಯನ್ನು ನೀಡಿದೆ.

ನಾವು ಆರ್​ಟಿ ಹಾಗೂ ಸ್ಪುಟ್ನಿಕ್​ನಂತಹ ಯುಟ್ಯೂಬ್​ ಚಾನೆಲ್​ಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ನಿರ್ಬಂಧಿಸುತ್ತಿದ್ದೇವೆ. ನಮ್ಮ ಸಿಸ್ಟಂಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಮೊದಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಯುಟ್ಯೂಬ್​ ಹೇಳಿದೆ.

ಸೋಮವಾರದಂದು ಫೇಸ್​ಬುಕ್​​ ಕೂಡ ಯುರೋಪಿಯನ್​ ಒಕ್ಕೂಟದ ಕುರಿತಂತೆ ಆರ್​ಟಿ ಹಾಗೂ ಸ್ಪುಟ್ನಿಕ್​ ಪ್ರಕಟಿಸಿದ ವಿಷಯಗಳನ್ನು ನಿರ್ಬಂಧಿಸಿತ್ತು. ರಷ್ಯಾ ಬೆಂಬಲಿತ ಈ ಎರಡು ಮಾಧ್ಯಮಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ರ ವಕ್ತಾರರಂತೆ ಕೆಲಸ ಮಾಡುತ್ತಿವೆ ಎನ್ನಲಾಗಿದೆ.

ಯುರೋಪಿಯನ್​ ಕಮಿಷನ್​ ಮುಖ್ಯಸ್ಥ ಉರ್ಸುಲಾ ವಾನ್​ ಡೆಲ್​ ಲೇಯನ್​ ಈ ವಿಚಾರವಾಗಿ ಮಾತನಾಡಿ ಪುಟಿನ್​ ಯುದ್ಧವನ್ನು ಘೋಷಣೆ ಮಾಡಿದ್ದನ್ನು ಸಮರ್ಥಿಸಿಕೊಳ್ಳುವಂತಹ ಸುಳ್ಳುಗಳನ್ನು ಪ್ರಸಾರ ಮಾಡುವ ಚಾನೆಲ್​ಗಳನ್ನು ನಿರ್ಬಂಧಿಸಲಾಗುವುದು ಎಂದು ಭಾನುವಾರದಂದು ಘೋಷಣೆ ಮಾಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...