
ರಷ್ಯಾ-ಉಕ್ರೇನ್ ಸಂಘರ್ಷದ ಬೆಳವಣಿಗೆಗಳನ್ನು ಜಗತ್ತು ವೀಕ್ಷಿಸುತ್ತಿರುವ ನಡುವೆಯೇ, ಆಕ್ರಮಣದ ಮೊದಲ ದಿನದಲ್ಲಿ ರಷ್ಯಾದ ಆರು ಜೆಟ್‌ಗಳನ್ನು ಉಕ್ರೇನ್‍ನ ನಿಗೂಢ ಪೈಲಟ್ ಹೊಡೆದುರುಳಿಸಿರುವ ಬಗ್ಗೆ ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ.
ಘೋಸ್ಟ್ ಆಫ್ ಕೈವ್ ಎಂದು ಹೆಸರಿಸಲಾದ ಪೈಲಟ್, ರಷ್ಯಾದ ನಾಲ್ಕು ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಹೇಳುತ್ತದೆ. ಎರಡು ಎಸ್ ಯು-35 ಫ್ಲಾಂಕರ್‌ಗಳು, ಒಂದು ಎಸ್ ಯು-27 ಫ್ಲಾಂಕರ್ ಮತ್ತು ಒಂದು ಮಿಗ್-29 ಫುಲ್‌ಕ್ರಮ್ ಹಾಗೂ ಸು- 25 ಅನ್ನು ಹೊಡೆದುರುಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.
ಆದರೆ, ಇದು ನಿಜವೋ ಅಥವಾ ಸುಳ್ಳೋ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಉಕ್ರೇನ್ ನಾದ್ಯಂತ ಈ ಪೋಸ್ಟ್ ವ್ಯಾಪಕವಾಗಿ ವೈರಲ್ ಆಗಿದೆ.