ರಷ್ಯಾ ದಾಳಿಯಿಂದ ನಲುಗಿ ಹೋಗಿರುವ ಪುಟ್ಟ ರಾಷ್ಟ್ರ ಉಕ್ರೇನ್ ಜಗತ್ತಿನ ಮೂಲೆ ಮೂಲೆಯಿಂದ್ಲೂ ನೆರವು ಕೇಳ್ತಾ ಇದೆ. ಉಕ್ರೇನ್ ನ ಉಪ ಪ್ರಧಾನಿ ಮೈಖೈಲೋ ಫೆಡರೋವ್, ಆಪಲ್ ಕಂಪನಿಯ ಸಿಇಓ ಟಿಮ್ ಕುಕ್ ಬಳಿ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾರೆ.
ಆಪಲ್ ಉತ್ಪನ್ನಗಳು, ಆಪಲ್ ಆಪ್ ಸ್ಟೋರ್ ಹಾಗೂ ಆಪಲ್ ನ ಇತರ ಸೇವೆಗಳನ್ನು ರಷ್ಯಾದಲ್ಲಿ ಸಂಪೂರ್ಣ ನಿರ್ಬಂಧಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಮನವಿ ಪತ್ರವೊಂದನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.
ರಷ್ಯಾದ ಕ್ಷಿಪಣಿ, ರಾಕೆಟ್ ಲಾಂಚರ್ ಹಾಗೂ ಟ್ಯಾಂಕರ್ ದಾಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಉತ್ತರ ಕೊಡೋಣ ಅಂತಾ ಹೇಳಿದ್ದಾರೆ. ಈಗಾಗ್ಲೇ ರಷ್ಯಾ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 200ಕ್ಕೂ ಹೆಚ್ಚು ಉಕ್ರೇನ್ ನಾಗರಿಕರು ಹತರಾಗಿದ್ದಾರೆ.
ಆಪಲ್ ರಷ್ಯಾದ ಒಕ್ಕೂಟದಲ್ಲಿ ಅತ್ಯಧಿಕ ಅಂದರೆ ಶೇ.28.72 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ನಂತರ Xiaomi ಶೇ. 23.3 ಮತ್ತು ಸ್ಯಾಮ್‌ಸಂಗ್ ಶೇ.22.4 ರಷ್ಟು ಪಾಲು ಹೊಂದಿದೆ. ಹಾಗಾಗಿ ರಷ್ಯನ್ ಫೆಡರೇಶನ್ ಗೆ ಆಪಲ್ ಸೇವೆಯನ್ನು ನಿರ್ಬಂಧಿಸಿ ಅಂತಾ ಕೇಳಿಕೊಂಡಿದ್ದಾರೆ.