ದಕ್ಷಿಣದ ಸೂಪರ್ ಸ್ಟಾರ್ ವಿಜಯ್ ದೇವರಕೊಂಡಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಯುವತಿಯರಿಗಂತೂ ವಿಜಯ್ ಫೇವರಿಟ್. ವಿಜಯ್ ದೇವರಕೊಂಡ ಲವ್ ಲೈಫ್ ಬಗ್ಗೆ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲವಿದೆ.
ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಬೆಸ್ಟ್ ಜೋಡಿಯಾಗ್ತಾರೆ ಅನ್ನೋದು ಫ್ಯಾನ್ಸ್ ಲೆಕ್ಕಾಚಾರ. ಇಬ್ಬರೂ ಪರಸ್ಪರ ಪ್ರೀತಿಸ್ತಿದ್ದಾರೆ ಅನ್ನೋ ಗಾಸಿಪ್ ಕೂಡ ಹಬ್ಬಿತ್ತು. ಆದ್ರೀಗ ಈ ಲೆಕ್ಕಾಚಾರ ಉಲ್ಟಾ ಆಗಿದೆ. ವಿಜಯ್‌ಗೆ ಕ್ರಶ್ ಇರೋದು ರಷ್ಮಿಕಾ ಮೇಲಲ್ಲ ಅನ್ನೋದು ಸ್ಪಷ್ಟವಾಗಿದೆ.
ವಿಜಯ್ ಇಷ್ಟಪಟ್ಟಿರೋದು ವಿಚ್ಛೇದಿತ ನಟಿಯೊಬ್ಬರನ್ನು. ಕಾಲೇಜು ದಿನಗಳಿಂದ್ಲೂ ಆಕೆಯೆಂದರೆ ತನಗೆ ಪಂಚಪ್ರಾಣವೆಂದು ಖುದ್ದು ವಿಜಯ್ ಹೇಳಿಕೊಂಡಿದ್ದಾರೆ. ಅವರ್ಯಾರು ಗೊತ್ತಾ ? ಫೇಮಸ್ ನಟಿ ಸಮಂತಾ ರುತ್ ಪ್ರಭು. ನಟ ನಾಗಚೈತನ್ಯ ಅವರ ಮಾಜಿ ಪತ್ನಿ.
ಟ್ವಿಟ್ಟರ್‌ನಲ್ಲಿ ಸಮಂತಾರ ಯಶೋಧಾ ಚಿತ್ರದ ಟ್ರೇಲರ್ ಹಂಚಿಕೊಂಡಿರೋ ವಿಜಯ್ ದೇವರಕೊಂಡ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಯಶೋಧಾ ಈ ಚಿತ್ರದಲ್ಲಿ ಸಮಂತಾ ಬಾಡಿಗೆ ತಾಯಿಯಾಗಿ ನಟಿಸುತ್ತಿದ್ದಾರೆ. ‘ಯಶೋದಾ’ ಚಿತ್ರದ ಟ್ರೇಲರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವಿಜಯ್ ದೇವರಕೊಂಡ ಹೀಗೆ ಬರೆದಿದ್ದಾರೆ- ‘ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಅವರನ್ನು ಪ್ರೀತಿಸುತ್ತಿದ್ದೆ. ಅವರನ್ನು ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ನೋಡಿದ ದಿನ ನನಗೆ ನೆನಪಿದೆ. ಆಕೆಯನ್ನು ನಾನು ಮೆಚ್ಚಿಕೊಂಡಿದ್ದೇನೆ, ಪೂಜಿಸುತ್ತೇನೆ. ಸಮಂತಾರ ಹೊಸ ಚಿತ್ರದ ಟ್ರೇಲರ್ ಹಂಚಿಕೊಳ್ಳಲು ತುಂಬಾ ಸಂತೋಷವಾಗ್ತಿದೆʼ.
ಹರಿ ಮತ್ತು ಹರೀಶ್ ಅವರು ಸಮಂತಾ ರುತ್ ಪ್ರಭು ಅವರ ಹೊಸ ಚಿತ್ರ ಯಶೋದಾವನ್ನು ನಿರ್ದೇಶಿಸಿದ್ದಾರೆ. ಬಾಡಿಗೆ ತಾಯಿ ಯಶೋಧಾಳ ಜೀವನದ ಸುತ್ತ ಈ ಚಿತ್ರ ಸುತ್ತುತ್ತದೆ. ತಮಿಳು ಮತ್ತು ತೆಲುಗಿನಲ್ಲಿ ಚಿತ್ರೀಕರಣಗೊಂಡ ಯಶೋಧಾ, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಡಬ್ ಆಗಲಿದೆ. ಚಿತ್ರ ನವೆಂಬರ್ 11 ರಂದು ಬಿಡುಗಡೆಯಾಗಲಿದೆ.ಸಮಂತಾ, ಶಿವ ನಿರ್ವಾಣ ಅವರ ರೊಮ್ಯಾಂಟಿಕ್ ಕಾಮಿಡಿ ‘ಖುಷಿ’ಯಲ್ಲಿ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಕಾಶ್ಮೀರದಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ.