
ಆ ಬಳಿಕ ಖುಷ್ಬೂ ತಮಿಳು ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು, ಅನಭಿಷಕ್ತ ರಾಣಿಯಾಗಿ ಮೆರೆದಿದ್ದರು. ಅಪಾರ ಅಭಿಮಾನಿ ಬಳಗವನ್ನು ತಮಿಳು ಚಿತ್ರರಂಗದಲ್ಲಿ ಖುಷ್ಬೂ ಹೊಂದಿದ್ದು ಅವರಿಗೆ ದೇವಾಲಯವನ್ನು ಸಹ ನಿರ್ಮಿಸಲಾಗಿತ್ತು. ಇಷ್ಟಾದರೂ ಸಹ ತಮ್ಮನ್ನು ಗುರುತಿಸಲು ಕಾರಣಕರ್ತವಾದ ಕನ್ನಡ ಚಿತ್ರರಂಗ ಹಾಗೂ ರವಿಚಂದ್ರನ್ ಅವರನ್ನು ಖುಷ್ಬೂ ಆಗಾಗ ನೆನಪಿಸಿಕೊಳ್ಳುತ್ತಿದ್ದರು.
ಪ್ರಸ್ತುತ ಚಿತ್ರರಂಗದಿಂದ ದೂರವಿದ್ದ ಖುಷ್ಬೂ ತಮಿಳು ಕಿರುತೆರೆಯ ಕೆಲವು ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಖುಷ್ಬೂ ರಾಜಕೀಯದಲ್ಲೂ ಸಹ ಸಕ್ರಿಯರಾಗಿದ್ದು, ಇದರ ಮಧ್ಯೆ ಖುಷ್ಬೂ ತಮ್ಮ ದೇಹ ತೂಕವನ್ನು ಇಳಿಸಿಕೊಂಡು ಹದಿ ಹರೆಯದವರಂತೆ ಕಾಣುತ್ತಿದ್ದಾರೆ.
ಜೊತೆಗೆ ಚಿತ್ರರಂಗದಲ್ಲಿ ಅಭಿನಯಿಸುವ ತಮ್ಮ ಮನದಿಂಗಿತವನ್ನೂ ಸಹ ಖುಷ್ಬೂ ತೆರೆದಿಟ್ಟಿದ್ದು, ಅವಕಾಶ ಸಿಕ್ಕರೆ ರವಿಚಂದ್ರನ್ ಸರ್ ಅವರ ಜೊತೆ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತೇನೆ ಎಂದಿದ್ದಾರೆ.
ಅಲ್ಲದೆ ತಮಗೆ ಉದ್ಯಾನನಗರಿ ಬೆಂಗಳೂರು ಬಹಳ ಇಷ್ಟ ಎಂದಿರುವ ಖುಷ್ಬೂ, ಎಂಜಿ ರಸ್ತೆಯಲ್ಲಿ ಐಸ್ ಕ್ರೀಮ್ ತಿನ್ನುವುದೇ ಒಂದು ಸುಂದರ ಅನುಭವ. ಆ ದಿನಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.