ಇತ್ತೀಚೆಗಷ್ಟೆ ಸ್ಯಾಂಡಲ್ವುಡ್ ನಲ್ಲಿ ದೊಡ್ಡದೊಂದು ಚರ್ಚೆಗೆ ಕಾರಣವಾದ ವಿಚಾರ ಅಂದ್ರೆ ಪವಿತ್ರ ಲೋಕೇಶ್, ನರೇಶ್ ಹಾಗೂ ರಮ್ಯಾ ರಘುಪತಿ. ಪವಿತ್ರ ಲೋಕೇಶ್ ಹಾಗೂ ನರೇಶ್ ನಡುವೆ ಸಂಬಂಧ ಇದೆ ಅಂತ ಹಾಗೂ ಇವರಿಬ್ಬರು ಗುಟ್ಟಾಗಿ ಮದುವೆಯಾಗಿದ್ದಾರೆ ಅಂತ ಗಾಸಿಪ್ ಓಡಾಡಿತ್ತು. ಇದಕ್ಕೆ ಪೂರಕವಾಗುವಂತೆ ನರೇಶ್ ಪತ್ನಿ ರಮ್ಯಾ ಕೂಡ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ್ದರು.
ಈ ಗಾಸಿಪ್, ಮಾಧ್ಯಮಗಳ ಮುಂದೆ ಬರೋದು ಅಷ್ಟಕ್ಕೆ ನಿಂತಿರಲಿಲ್ಲ. ಕಾನೂನು ಸಮರಕ್ಕೂ ರಮ್ಯಾ ಮುಂದಾಗಿದ್ದರು ಎಂದು ಹೇಳಲಾಗಿತ್ತು. ಆದರೆ ಈ ಪ್ರಕರಣಕ್ಕೆ ಇದೀಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ನರೇಶ್ ಮನೆಗೆ ರಮ್ಯಾ ರಘುಪತಿ ಹೋಗಿದ್ದಾರೆ ಎಂದು ಹೊಸ ಸುದ್ದಿಯೊಂದು ಚಿತ್ರರಂಗದ ಅಂಗಳದಲ್ಲಿ ಓಡಾಡುತ್ತಿದೆ.
ಹೌದು, ಟಾಲಿವುಡ್ ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ ಕೊಟ್ಟಿದ್ದಾರಂತೆ. ದೊಡ್ಡ ಮಟ್ಟದ ಜಗಳ, ಕಾನೂನು ಹೋರಾಟ ಇವೆಲ್ಲವನ್ನು ನೋಡಿದ ನರೇಶ್ ಹೆದರಿದ್ದಾರಂತೆ.
ಹೀಗಾಗಿ ರಮ್ಯಾ ಅವರಿಗೆ ಮನೆಗೆ ಬರುವ ಅವಕಾಶ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಪವಿತ್ರ ಲೋಕೇಶ್ ಕಥೆ ಏನು ಅಂತ ಕಾದು ನೋಡಬೇಕಿದೆ.