ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಎಸ್ ಐ ಟಿ ತನಿಖಾ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಲು ಸಿದ್ಧವಾಗಿದ್ದು, ತನಿಖಾ ವರದಿಗೆ ಎಸ್ ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೈಕೋರ್ಟ್ ಗೆ ಎಸ್ ಐ ಟಿ, ಎಸ್ ಪಿ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಈ ವೇಳೆ ಎಸ್ ಐ ಟಿ ಅಂತಿಮ ವರದಿ ಸಲ್ಲಿಕೆಗೆ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದು, ಆರೋಪಿ ಮಾಜಿ ಸಚಿವ ಅವರ ಮನವಿ ಮೇರೆಗೆ ಎಸ್ ಐ ಟಿ ರಚಿಸಲಾಗಿದೆ. ಹೀಗಾಗಿ ಎಸ್ ಐ ಟಿ ರಚನೆಯೇ ದೋಷಪೂರಿತ ಎಂದು ಹೇಳಿದರು.
ಸಚಿವರಾದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ನಾವು ಯಾರಿಗೂ ಕೇರ್ ಮಾಡಲ್ಲ ಎಂದು ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ತಿಳಿಸಿದರು. ಇನ್ನು ಸಿಡಿ ಬಹಿರಂಗ ಪ್ರಕರಣದ ಅಂತಿಮ ವರದಿ ಸಲ್ಲಿಸದಂತೆ ಆದೇಶವಿದೆ. ಆದರೆ ಮಧ್ಯಂತರ ಆದೇಶ ತೆರವಿಗೆ ಎಸ್ ಐ ಟಿ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಎಸ್ ಐ ಟಿ ಅರ್ಜಿ ಸಲ್ಲಿಸಿದ ನಂತರ ಈ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಮುಂದೂಡಿದೆ.