ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪರ ವಕೀಲ ಜಗದೀಶ್ ಅವರ ಮೂಲಕ ಯುವತಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡಿದೆ.
ಆಕೆ ನೀಡುವ ಹೇಳಿಕೆ ಬಳಿಕ ಇಡೀ ಪ್ರಕರಣಕ್ಕೆ ತಿರುವು ಸಿಗಲಿದೆ. ಹೀಗಾಗಿ ಯುವತಿ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ. ಸಿಡಿಯಲ್ಲಿದ್ದ ಯುವತಿಯ ಪೋಷಕರು ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ.
ಪೋಷಕರ ಆರೋಪದಿಂದ ರಮೇಶ್ ಜಾರಕಿಹೊಳಿ ಅವರಿಗೆ ಸಂಕಷ್ಟ ತಪ್ಪಿಲ್ಲ. ಪೋಷಕರ ಹೇಳಿಕೆಯಿಂದ ರಮೇಶ್ ನಿರಪರಾಧಿಯಾದಂತಲ್ಲ. ಪೋಷಕರ ಹೇಳಿಕೆಗಿಂತ ಯುವತಿಯ ಹೇಳಿಕೆಗೆ ಪ್ರಾಮುಖ್ಯತೆ ಇದ್ದು, ಆಕೆ ನೀಡುವ ಹೇಳಿಕೆ ಮೇಲೆ ಸಿಡಿ ಪ್ರಕರಣ ನಿಂತಿದೆ. ಯುವತಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡುವ ಸಾಧ್ಯತೆ ಇದೆ. ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಹೇಳಿಕೆ ನೀಡಲಿದ್ದು, ನಂತರದಲ್ಲಿ ರಮೇಶ್ ಜಾರಕಿಹೊಳಿ ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಲಾಗಿದೆ.