ಬೆಂಗಳೂರು: ಕಾಂಗ್ರೆಸ್ ನಾಯಕ ಕೆ.ಆರ್. ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಶ್ರೀನಿವಾಸ ಪುರದ ನೂತನ ಆರೋಗ್ಯ ಕೇಂದ್ರವನ್ನು ಅಧಿಕೃತವಾಗಿ ಇಂದು ಉದ್ಘಾಟಿಸಲಾಗುವುದು ಎಂದು ಹೇಳಿದರು.
ಈ ಮೊದಲೇ ಅಂದರೆ ಆಗಸ್ಟ್ 26 ರಂದು ಕೋಲಾರದ ಮುದುವಾಡಿ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ್ಧ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ವಿರುದ್ಧ ಈ ವೇಳೆ ಸಚಿವರು ವಾಗ್ದಾಳಿ ನಡೆಸಿದರು. ಆಗಸ್ಟ್ 26ರಂದು ಮಾಡಿದ್ದ ಉದ್ಘಾಟನೆ ಬಗ್ಗೆ ಕೆ.ಆರ್.ರಮೇಶ್ ಕುಮಾರ್ ಅವರನ್ನೇ ಹೋಗಿ ಕೇಳಿ ಎಂದು ಸಚಿವರು ಕಿಡಿಕಾರಿದರು. ಅವರ ಬಾಯಿ ಮಾತಿನಲ್ಲಿ ಮಾತ್ರ ಶಿಷ್ಟಾಚಾರ ಇರುತ್ತದೆ. ಮಾಡೋದು ಮಾತ್ರ ಬೇರೆ ಎಂದು ವಾಗ್ದಾಳಿ ನಡೆಸಿದರು.
ಲಸಿಕೆ ಪಡೆಯದವರಿಗೆ ನೋ ರೇಷನ್: ಅಧಿಕೃತ ಆದೇಶ ಹೊರಡಿಸಿಯೇ ಇಲ್ಲ ಅಂದ್ರು ಚಾಮರಾಜನಗರ ಡಿಸಿ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಕೋಲಾರ ಜಿಲ್ಲೆ ಮುದುವಾಡಿ ಆರೋಗ್ಯ ಕೇಂದ್ರವನ್ನು ಇಂದು ಅಧಿಕೃತವಾಗಿ ಉದ್ಘಾಟಿಸುತ್ತೇವೆ. ಅವರಾಗಿ ಅವರೇ ಕಾರ್ಯಕರ್ತರೊಂದಿಗೆ ಹೋಗಿ ಟೇಪ್ ಕಟ್ ಮಾಡಿರುವಂಥದ್ದು, ಈ ರೀತಿ ಎಲ್ಲಾದರೂ ಆಗಿದೆಯಾ..? ಈ ಹಿಂದೆ ಅವರೂ ಕೂಡ ಆರೋಗ್ಯ ಸಚಿವರಾಗಿದ್ದವರು. ಬೇರೆ ಯಾರಾದರೂ ಈ ರೀತಿ ಮಾಡಿದ್ದರೆ ಅವರು ಏನು ಹೇಳುತ್ತಿದ್ದರು?” ಎಂದು ಕಿಡಿಕಾರಿದ್ದಾರೆ.