ರಥೋತ್ಸವ ನಡೆಯುತ್ತಿದ್ದ ವೇಳೆ ತೇರಿನ ಚಕ್ರಕ್ಕೆ ಸಿಲುಕಿ ಭಕ್ತರೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿದೆ.
ಗುರುವಾರದಂದು ಗ್ರಾಮದಲ್ಲಿ ನಾರದಮುನಿ ರಥೋತ್ಸವ ನಡೆದಿದ್ದು, ಈ ವೇಳೆ ದಾವಣಗೆರೆಯ 45 ವರ್ಷದ ಸುರೇಶ್ ಬಸವನಗೌಡ ತೇರಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಭಕ್ತರು ಆತಂಕಕ್ಕೆ ಒಳಗಾಗಿದ್ದು, ಬಳಿಕ ಪೊಲೀಸರು ಶವ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಗಾಲಿಯನ್ನು ನೀರಿನಿಂದ ತೊಳೆದು ತೇರನ್ನು ದೇವಸ್ಥಾನದವರೆಗೆ ಎಳೆದು ತರಲಾಗಿದೆ.