
ದುಬೈ ಎಕ್ಸ್ಪೋ 2020 ಯಲ್ಲಿಯೂ ಇದೇ ಘಟನೆ ಸಂಭವಿಸಿದೆ. ವಿಶೇಷ ಅಂದರೆ ಈ ಬಾರಿ ರಣವೀರ್ ಸಿಂಗ್ ಜೊತೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಸೇರಿದ್ದಾರೆ.
ದುಬೈಗೆ ಭೇಟಿ ನೀಡಿದ ಮೂರನೇ ದಿನದಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆಯಲ್ಲಿ ದುಬೈ ಎಕ್ಸ್ಪೋ 2020ಯ ಇಂಡಿಯಾ ಪೆವಿಲಿಯನ್ಸ್ನಲ್ಲಿ ದಿ ಗ್ಲೋಬಲ್ ರೀಚ್ ಆಫ್ ಇಂಡಿಯನ್ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಇಂಡಸ್ಟ್ರಿ ಕುರಿತು ಸಂವಾದ ನಡೆಸಿದರು.
ಈ ಸಂವಾದ ಕಾರ್ಯಕ್ರಮದ ನಡುವೆ ರಣವೀರ್ ಸಿಂಗ್ ಬಳಿ ಮಲ್ಹಾರಿ ಹಾಡಿಗೆ ನೃತ್ಯ ಮಾಡುವಂತೆ ಕೇಳಲಾಯ್ತು. ಈ ವೇಳೆಯಲ್ಲಿ ರಣವೀರ್ ಸಿಂಗ್ ಜೊತೆಯಲ್ಲಿ ಅನುರಾಗ್ ಠಾಕೂರ್ ಕೂಡ ಹೆಜ್ಜೆ ಹಾಕಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.