ಪ್ರಾಣಿಗಳ ನಡುವಿನ ರಣರೋಚಕ ಕಾಳಗದ ವಿಡಿಯೋಗಳು ಆಗಾಗೆ ಕಾಣ ಸಿಗುತ್ತವೆ. ಇದೀಗ ಬಂದಿರುವ ತಾಜಾ ವಿಡಿಯೋದಲ್ಲಿ ದೈತ್ಯ ಹಾವೊಂದು ಮೊಸಳೆಯನ್ನು ಹೊಸಕಿ ಸಾಯಿಸುವ ಮೈ ಜುಮ್ಮೆನಿಸುತ್ತದೆ.
ದೈತ್ಯ ಅನಕೊಂಡ ದಕ್ಷಿಣ ಅಮೆರಿಕಾದ ಉತ್ತರ ಪ್ರದೇಶಗಳಿಗೆ ಸ್ಥಳಿಯವಾದ ಬೋವಾ ಜಾತಿಯಾಗಿದೆ. ಹಸಿರು ಬಣ್ಣದ ಈ ಹಾವು ಅತ್ಯಂತ ತೂಕ ಮತ್ತು ದೀರ್ ಕಾಲ ಬದುಕುವ ಹಾವಿನ ಜಾತಿಗಳಲ್ಲಿ ಒಂದಾಗಿದೆ. ಇದ 30 ಅಡಿ ಉದ್ದವನ್ನು ಹೊಂದಿರಬಹುದು, 250 ಕೆಜಿಯಷ್ಟು ತೂಗಬಹುದು. ಹಸಿರು ಅನಕೊಂಡಗಳು ಸಾಮಾನ್ಯವಾಗಿ ಜೌಗು ಮತ್ತು ತೊರೆಗಳಂತಹ ನೀರಿನಲ್ಲಿ ಕಂಡುಬರುತ್ತವೆ. ಸಣ್ಣ ಅನಕೊಂಡಗಳು ಸಾಮಾನ್ಯವಾಗಿ ಸಣ್ಣ ಸಸ್ತನಿಗಳು, ಪಕ್ಷಿಗಳು, ಮೀನುಗಳು, ಇತ್ಯಾದಿಗಳಂತಹ ಬೇಟೆಯನ್ನು ಬೇಟೆಯಾಡುತ್ತವೆ. ಆದಾಗ್ಯೂ, ದೊಡ್ಡವು ದೊಡ್ಡ ಪ್ರಾಣಿಗಳನ್ನು ತಿನ್ನಲು ಸಮರ್ಥವಾಗಿರುತ್ತವೆ.
ಈ ವಿಡಿಯೋದಲ್ಲಿ ಮೊಸಳೆ ಹಾಗೂ ಹಾವಿನ ಕಾದಾಟದಲ್ಲಿ ಮೊಸಳೆ ಜೀವ ಬಿಟ್ಟಿತು.
ವೈರಲ್ ಆಗುತ್ತಿರುವ ವೀಡಿಯೊವನ್ನು ಆಫ್ರಿಕನ್ ವೈಲ್ಡ್ಲೈ್1′ ಪುಟವು ಹಂಚಿಕೊಂಡಿದೆ. ದೈತ್ಯ ಅನಕೊಂಡವು ನೀರಿನಲ್ಲಿ ಮೊಸಳೆಯ ಸಂಪೂರ್ಣ ದೇಹದ ಸುತ್ತಲೂ ಬಿಗಿಯಾಗಿ ಸುತ್ತಿರುವುದನ್ನು ನೋಡಬಹುದು. ಮೊಸಳೆಯು ಉಸಿರಾಡಲು ಹೆಣಗಾಡುತ್ತಿದ್ದು, ಕೊನೆಗೆ ಹಾವಿನ ಹಿಡಿತ ಇನ್ನಷ್ಟು ಬಿಗಿಯಾಗುತ್ತಿದ್ದಂತೆ ಮೊಸಳೆ ಜೀವ ಬಿಡುತ್ತದೆ. ಈ ವಿಡಿಯೋ ನೆಟ್ಟಿಗರನ್ನು ಹೆಚ್ಚು ಆಕಷಿರ್ಸಿದೆ.