ಬಾಲಿವುಡ್ ನಟ – ನಟಿಯರಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೇ ವೇಳೆ ಸ್ನೇಹಿತರು, ಸಂಬಂಧಿಕರು ಮತ್ತು ಅಭಿಮಾನಿಗಳಿಂದ ಶುಭ ಹಾರೈಕೆಗಳು ಹರಿದುಬಂದವು.
ಅಮುಲ್, ಜೊಮಾಟೊ ಸೇರಿ ಹಲವು ಬ್ರ್ಯಾಂಡ್ಗಳು ಕೂಡ ಬ್ಯಾಂಡ್ವ್ಯಾಗನ್ಗೆ ಸೇರಿಕೊಂಡು ದಂಪತಿಗೆ ಶುಭ ಹಾರೈಸಿವೆ. ಇಲ್ಲೊಂದು ಬ್ರ್ಯಾಂಡ್ನ ಶುಭ ಹಾರೈಕೆ ನೆಟ್ಟಿಗರ ಗಮನ ಸೆಳೆದಿದೆ.
ಕಾಂಡೋಮ್ ಬ್ರ್ಯಾಂಡ್ ಡ್ಯುರೆಕ್ಸ್ ಆಲಿಯಾ ಮತ್ತು ರಣಬೀರ್ ಅವರ ಮದುವೆಗೆ ಶುಭ ಹಾರೈಸಿದ್ದು, ಈ ಹಾರೈಕೆಯ ಪೋಸ್ಟ್ ಆನ್ಲೈನ್ನಲ್ಲಿ ವೈರಲ್ ಆಗಿದೆ.
ರಣಬೀರ್ ಕಪೂರ್ ಅವರ 2016ರಲ್ಲಿ ತೆರೆಕಂಡ ಚಿತ್ರ ಏ ದಿಲ್ ಹೈ ಮುಷ್ಕಿಲ್ ಚಿತ್ರದ ಚನ್ನ ಮೆರೆಯಾ….. ಹಾಡಿನ ಒಂದು ಸಾಲು ಉಲ್ಲೇಖಿಸಿ ಪೋಸ್ಟ್ ಮಾಡಲಾಗಿದೆ.
ಮೃತ ಸಂತೋಷ್ ಪಾಟೀಲ್ ಮೊಬೈಲ್ ನಲ್ಲಿತ್ತು 88 ಮಿಸ್ಡ್ ಕಾಲ್….!
“ಆತ್ಮೀಯ ರಣಬೀರ್ ಮತ್ತು ಆಲಿಯಾ, ಮೆಹ್ಫಿಲ್ ಮೇ ತೇರೆ ಹಮ್ ನಾ ರಹೇಂ ಜೋ… ಫನ್ ತೋ ನಹೀ ಹೈ :(” ಎಂದು ಹಾಡಿನ ಸಾಲನ್ನು ಸೇರಿಸಿ ಸಾಲು ಬೆಳಸಿರುವ ಡ್ಯುರೆಕ್ಸ್, “ನಾವು ಎಲ್ಲಿ ಆರ್ ಎಸ್ ವಿ ಪಿ (ರೆಸ್ಪಾಂಡ್ ಇಫ್ ಯು ಪ್ಲೀಸ್) ಮಾಡಬಹುದೇ? ಸ್ನೇಹಿತರಿಗಾಗಿ ಕೇಳಲಾಗುತ್ತಿದೆ. ಖರೀದಿಸಲು ಬಯೋದಲ್ಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ !” ಎಂದು ಶೀರ್ಷಿಕೆ ನೀಡಲಾಗಿದೆ.
ಬ್ರ್ಯಾಂಡ್ನ ಈ ಮಾರ್ಕೆಟಿಂಗ್ ತಂತ್ರಕ್ಕಾಗಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ನಕ್ಕುನಲಿದಿದ್ದಾರೆ. ಭಾಯೀ, ನಾನು ಆಲಿಯಾ ರಣಬೀರ್ ಪೋಸ್ಟ್ಗಿಂತ ಡ್ಯುರೆಕ್ಸ್ ಪೋಸ್ಟ್ ಅನ್ನು ಪ್ರೀತಿಸುತ್ತೇನೆ” ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಅಂದಹಾಗೆ ಹಾಡಿನ ಆ ಸಾಲಿನ ಭಾವಾರ್ಥ, ನಿಮ್ಮ ಒಂದಾಗುವಿಕೆಯಲ್ಲಿ ನಾನಿಲ್ಲದಿದ್ದರೆ……ಹೇಗೆ? ಎಂದು ಡ್ಯುರೆಕ್ಸ್ ಹಾಸಿಗೆಯು ಅಲಿಯಾ, ರಣಬೀರ್ಗೆ ಪ್ರಶ್ನಿಸುವಂತೆ ಚಮತ್ಕಾರಿಯಾಗಿ ಸಾಲನ್ನು ಪೋಸ್ಟರ್ನಲ್ಲಿ ಬಳಸಲಾಗಿದೆ.