ನವದೆಹಲಿ : ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಜನರಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಇಲ್ಲಿಯ ಪಾಲಂ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು, ನೌಕಾಪಡೆ, ವಾಯುಪಡೆ ಹಾಗೂ ಭೂ ಸೇನೆಯ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದರು.
ಇದಕ್ಕೂ ಮೊದಲು ಊಟಿಯ ವೆಲ್ಲಿಂಗ್ಟನ್ ಡಿಫೆನ್ಸ್ ಕಾಲೇಜು ಆವರಣದಲ್ಲಿ ಅಂತಿಮ ನಮನ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಸಿಎ ಸ್ಟಾಲಿನ್, ತೆಲಂಗಾಣ ರಾಜ್ಯಪಾಲ ತಮಿಳ್ ಸಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಆ ನಂತರ 13 ಜನರ ಪಾರ್ಥಿವ ಶರೀರಗಳನ್ನು ಪ್ರತ್ಯೇಕ ಆಂಬುಲೇನ್ಸ್ ಗಳಲ್ಲಿ ದೆಹಲಿಯಲ್ಲಿನ ವಾಯು ನೆಲೆಗೆ ತರಲಾಯಿತು. ದಾರಿಯುದ್ದಕ್ಕೂ ಜನರು ಹೂವಿನ ಮಳೆ ಸುರಿಸಿ, ನಮನ ಸಲ್ಲಿಸಿದರು. ಬಿಪಿನ್ ರಾವತ್ ಅವರ ಕುರಿತು ಜನರು ಘೋಷಣೆಗಳನ್ನು ಕೂಗಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
ನಾಳೆ ಬೆಳಿಗ್ಗೆ 11ಕ್ಕೆ ರಾವತ್ ಅವರ ನಿವಾಸದಲ್ಲಿ ದಂಪತಿ ಭೌತಿಕ ಕಾರ್ಯಕ್ರಮಗಳು ನಡೆಯಲಿದ್ದು, ಆ ನಂತರ ಅವರ ಬಂಧು – ಬಾಂಧವರಿಗೆ ನಮನ ಸಲ್ಲಿಸಲು ಅವಕಾಶ ನೀಡಲಾಗುವುದು. ಮಧ್ಯಾಹ್ನ 2 ರಿಂದ ಬಿಪಿನ್ ರಾವತ್ ಹಾಗೂ ಅವರ ದಂಪತಿಯ ಮೆರವಣಿಗೆ ಸ್ಮಶಾದವರೆಗೂ ನಡೆಯಲಿದೆ. ಸಂಜೆ 4ಕ್ಕೆ ಧೌಲಾಖಾನ್ ನಲ್ಲಿನ ಬ್ರಾರ್ ಕ್ರಿಮೆಟೋರಿಯಂನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಇನ್ನುಳಿದ ಹುತಾತ್ಮರ ಪಾರ್ಥಿವ ಶರೀರಿಗಳನ್ನು ಅವರ ಗ್ರಾಮಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿಯೇ ಅವರ ಅಂತ್ಯಕ್ರಿಯೆ ಜರುಗಲಿದೆ.