ನಿಮಗೆ ಆಗಾಗ ದಣಿದ ಅಥವಾ ಆಯಾಸವಾದಂತಹ ಅನುಭವವಾಗಿದ್ದುಂಟಾ?? ಹಾಗಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ರಕ್ತಹೀನತೆಯ ಸಂಕೇತವಾಗಿರುತ್ತದೆ. ಹೌದು, ಇದು ಮುಖ್ಯವಾಗಿ ಮಹಿಳೆಯರಲ್ಲಿ ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ.
ರಕ್ತಹೀನತೆಯು ದೇಹದ ಸ್ನಾಯುಗಳಿಗೆ ಮತ್ತು ಇನ್ನಿತರ ಭಾಗಗಳಿಗೆ ಆಮ್ಲಜನಕವನ್ನು ಪೂರೈಸಲು ಬೇಕಾಗಿರುವ ಕೆಂಪು ರಕ್ತಕಣಗಳನ್ನು ಕುಂಠಿತಗೊಳ್ಳಿಸುತ್ತದೆ.
ಇದರ ಪರಿಣಾಮವಾಗಿ ವ್ಯಕ್ತಿಯು ಆಯಾಸ ಮತ್ತು ದೌರ್ಬಲ್ಯದಿಂದ ಬಳಲುತ್ತಾನೆ. ಅಷ್ಟೇ ಅಲ್ಲದೇ ಎದೆಯುರಿ, ಬೆವರುವಿಕೆ, ಕಾಲುಗಳಲ್ಲಿ ಉರಿಯೂತ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ದೇಹಕ್ಕೆ ಅಗತ್ಯವಿರುವ ವಿಟಮಿನ್ಸ್, ಕಬ್ಬಿಣಾಂಶವಿರುವಂತಹ ಆಹಾರಗಳನ್ನು ಸೇವಿಸುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು. ಅದಕ್ಕೆಂದೇ ಇಲ್ಲಿ ರಕ್ತಹೀನತೆಯ ವಿರುದ್ಧ ಹೋರಾಡುವ ಕೆಲವು ಆಹಾರ ಪದಾರ್ಥಗಳ ಪಟ್ಟಿಯನ್ನು ಕೊಡಲಾಗಿದೆ.
ದಾಳಿಂಬೆ : ಇದು ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ಸೂಕ್ತವಾದ ಮದ್ದು. ಇದು ಕಬ್ಬಿಣ, ಕ್ಯಾಲ್ಸಿಯಂ, ಫೈಬರ್ ಮತ್ತು ಮೆಗ್ನೀಶಿಯಂನಂತಹ ಅನೇಕ ಖನಿಜಾಂಶವನ್ನು ಹೊಂದಿದೆ. ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.
ಪಾಲಾಕ್ : ಸಾಮಾನ್ಯವಾಗಿ ಸೊಪ್ಪುಗಳಲ್ಲಿ ಪಾಲಾಕ್ ಬಹಳಾನೇ ಉಪಯುಕ್ತವಾದುದಾಗಿದೆ. ಇದರಲ್ಲಿ ಕಬ್ಬಿಣದ ಅಂಶ ಯಥೇಚ್ಛವಾಗಿದ್ದು, ಫೈಬರ್, ಕ್ಯಾಲ್ಸಿಯಂ ಮತ್ತು ಬೀಟಾ-ಕ್ಯಾರೊಟಿನ್ ಅಂಶವು ಸಮೃದ್ಧವಾಗಿದೆ.
ನಟ್ಸ್ : ಡ್ರೈ ಫ್ರೂಟ್ಸ್ ಗಳನ್ನು ಸಾಮಾನ್ಯವಾಗಿ ಹೆಚ್ಚಿಗೆ ಯಾರೂ ಉಪಯೋಗಿಸುವುದಿಲ್ಲ. ಆದರೆ, ಇದರಲ್ಲಿ ಕಬ್ಬಿಣಾಂಶ ಯಥೇಚ್ಛವಾಗಿ ಲಭಿಸುತ್ತದೆ. ಬಾದಾಮಿ, ಪಿಸ್ತಾ, ವಾಲ್ನಟ್ಸ್ ಗಳಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವ ಗುಣವಿರುವುದರಿಂದ ಪ್ರತಿದಿನ ಸೇವಿಸಬಹುದು.
ಬೀಟ್ ರೂಟ್ : ಇದು ದೇಹಕ್ಕೆ ಬೇಕಾದ ಕೆಂಪು ರಕ್ತ ಕಣಗಳನ್ನು ಸಕ್ರಿಯಗೊಳಿಸುವಲ್ಲಿ ಸಹಾಯ ಮಾಡುತ್ತದೆ.