ಆಧುನಿಕ ಜಗತ್ತಿನಲ್ಲಿ ರಕ್ತಹೀನತೆ ಬಹುತೇಕರನ್ನು ಬಹುವಾಗಿ ಕಾಡುತ್ತಿರುವ ಸಮಸ್ಯೆ. ಮನೆಯಲ್ಲೇ ಇರುವ ವಸ್ತುಗಳನ್ನು ಸೇವಿಸುವ ಮೂಲಕ ರಕ್ತ ಹೀನತೆಯಿಂದ ಹೇಗೆ ಬಚಾವಾಗಬಹುದು ಎಂಬುದನ್ನು ತಿಳಿಯೋಣ.
ಚರ್ಮ ಕಳೆಗುಂದುವುದು, ಎದೆ ನೋವು, ಮೂಲವ್ಯಾಧಿ, ಹೃದಯ ಬಡಿತ ಹೆಚ್ಚಾಗುವುದು, ಬೆರಳುಗಳು ಸೋಲುವುದು, ಯಾವುದೇ ಕೆಲಸ ಮಾಡಿದರೂ ಆಯಾಸವಾಗುವುದು, ಕೂದಲು ಉದುರುವುದು ಇವೆಲ್ಲವೂ ರಕ್ತ ಹೀನತೆಯ ಮುಖ್ಯ ಲಕ್ಷಣಗಳು. ರಾತ್ರಿ ದ್ರಾಕ್ಷಿಯನ್ನು ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದು ರಕ್ತಹೀನತೆಗೆ ಅತ್ಯುತ್ತಮ ಮದ್ದು.
ಸಾಧ್ಯವಾದರೆ ಮಧ್ಯಾಹ್ನದ ಮತ್ತು ರಾತ್ರಿಯ ಊಟದ ಮೊದಲು ಇದನ್ನು ಪುನರಾವರ್ತಿಸಿ. ಹೀಗೆ ಕನಿಷ್ಠ ಒಂಬತ್ತು ದಿನ ಮಾಡಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಂತೆಯೇ.
ನೀವು ಸೇವಿಸುವ ಆಹಾರದಲ್ಲಿ ಸೊಪ್ಪಿಗೆ ಹೆಚ್ಚಿನ ಜಾಗ ಇರಲಿ. ಸಕ್ಕರೆ ಬದಲು ಬೆಲ್ಲ ಬಳಸಿ. ಹಣ್ಣುಗಳ ಪೈಕಿ ಚಿಕ್ಕು ಹೆಚ್ಚು ತಿನ್ನಿ. ಈ ಮೂಲಕ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿಕೊಳ್ಳಬಹುದು.