
ರ್ಯಾಪರ್ ಯೋ ಯೋ ಹನಿ ಸಿಂಗ್ ವಿರುದ್ಧ ಈವೆಂಟ್ ಕೋ ಆರ್ಡಿನೇಟರ್ ಮೇಲೆ ಹಲ್ಲೆ ಮತ್ತು ಅಪಹರಣ ಮಾಡಿದ ಆರೋಪ ಕೇಳಿಬಂದಿದೆ.
ಮುಂಬೈ ನಿವಾಸಿ ವಿವೇಕ್ ರಾಮನ್ ಅವರು ಹನಿ ಸಿಂಗ್ ಮತ್ತು ಇತರರ ವಿರುದ್ಧ ಬಿಕೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈವೆಂಟ್ ವ್ಯವಹಾರದ ಮಾಲೀಕ ವಿವೇಕ್ ರಾಮನ್ ಅವರು ಹನಿ ಸಿಂಗ್ ಮತ್ತು ಇತರರ ವಿರುದ್ಧ ಅಪಹರಣ, ಒತ್ತೆಯಾಳಾಗಿ ಇಟ್ಟುಕೊಂಡಿದ್ದಾಗಿ ಆರೋಪ ಮತ್ತು ನಿಂದನೆಗಾಗಿ ಪ್ರಕರಣ ದಾಖಲಿಸಿದ್ದಾರೆ.
ಹನಿ ಸಿಂಗ್ ತನ್ನ ನಟಿ-ಮಾಡೆಲ್ ಗೆಳತಿ ಟೀನಾ ಥಡಾನಿಯೊಂದಿಗೆ ಬೇರ್ಪಟ್ಟ ಒಂದು ದಿನದ ನಂತರ ಈ ಪ್ರಕರಣ ದಾಖಲಾಗಿದೆ.