ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಭಾರತದ ಸೇನೆ ಸೇರಲು ಬಯಸಿದ್ದರಂತೆ. ಆದರೆ ಕೌಟುಂಬಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ಖುದ್ದು ರಾಜನಾಥ್ ಸಿಂಗ್ ಅವರೇ ಹೇಳಿದ್ದಾರೆ. ಆಸ್ಸಾಂ ರೈಫಲ್ಸ್ ಹಾಗೂ 57ನೇ ಪರ್ವತ ವಿಭಾಗದ ಯೋಧರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ರು.
ಯೋಧನಾಗಬೇಕೆಂದು ಬಯಸಿದ್ದ ನಾನು ಲಿಖಿತ ಪರೀಕ್ಷೆಯನ್ನೂ ಬರೆದಿದ್ದೆ. ಆದ್ರೆ ತಂದೆಯ ಸಾವು ಜೊತೆಗೆ ಇನ್ನಿತರ ಕೌಟುಂಬಿಕ ಸಮಸ್ಯೆಗಳಿಂದಾಗಿ ನನ್ನ ಆಸೆ ಈಡೇರಲಿಲ್ಲ ಅಂತಾ ರಾಜನಾಥ್ ಸಿಂಗ್ ಹೇಳಿದ್ರು. ಸೇನೆಯ ಸಮವಸ್ತ್ರದಲ್ಲೇ ಮ್ಯಾಜಿಕ್ ಇದೆ, ಅದನ್ನು ಪುಟ್ಟ ಮಗುವಿಗೆ ಕೊಟ್ಟು ನೋಡಿ, ಮಗುವಿನ ವ್ಯಕ್ತಿತ್ವವೇ ಬದಲಾಗುತ್ತದೆ ಎಂದರು.
ಯೋಧರನ್ನು ಖುದ್ದು ಭೇಟಿಯಾಗಿ ಸಂಭಾಷಿಸಿದ್ರು. ಅಷ್ಟೇ ಅಲ್ಲ ಭಾರತ ಚೀನಾ ಜಟಾಪಟಿ ವೇಳೆ ನಮ್ಮ ಸೈನಿಕರು ಪ್ರದರ್ಶಿಸಿದ ಸಾಹಸ ತ್ಯಾಗವನ್ನು ಕೊಂಡಾಡಿದ್ರು. ವೈದ್ಯರು, ಎಂಜಿನಿಯರ್ಗಳು, ಚಾರ್ಟರ್ಡ್ ಅಕೌಂಟಂಟ್ಗಳೆಲ್ಲ ದೇಶಕ್ಕೆ ತಮ್ಮದೇ ಆದ ಕೊಡುಗೆ ಕೊಡುತ್ತಿದ್ದಾರೆ. ಆದರೆ ದೇಶಕ್ಕೆ ಸೈನಿಕರ ಕೊಡುಗೆ ಎಲ್ಲಕ್ಕಿಂತಲೂ ಮಿಗಿಲಾದದ್ದು, ಇದು ಸೇವೆ ಮತ್ತು ವೃತ್ತಿ ಎರಡನ್ನೂ ಮೀರಿದ್ದು ಅಂತಾ ಸಚಿವರು ಅಭಿಪ್ರಾಯಪಟ್ಟಿದ್ದಾರೆ.