
ವಿದ್ಯಾರ್ಥಿಯೊಬ್ಬ ಬರೆದ ಕ್ಷಮಾಪಣೆಯ ಟಿಪ್ಪಣಿಯನ್ನು ಗುಲಾಟಿ ಗುಲಾಟಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಂತ ವಿದ್ಯಾರ್ಥಿ ಯಾವುದೇ ಕಿಡಿಗೇಡಿತನ ಮಾಡಿಲ್ಲ. ಈ ಟಿಪ್ಪಣಿ ಇಂಗ್ಲಿಷ್ ಪಾಠದ ಭಾಗವಾಗಿತ್ತು. ತನ್ನ ಸಹೋದರಿಯ ಮದುವೆಗೆ ಹಾಜರಾಗಲು ರಜೆ ಪಡೆಯದ ಸೈನಿಕನ ದೃಷ್ಟಿಕೋನದಿಂದ ಕ್ಷಮೆಯಾಚನೆಯ ಟಿಪ್ಪಣಿಯನ್ನು ಬರೆಯುವಂತೆ ಗುಲಾಟಿ ವಿದ್ಯಾರ್ಥಿಗಳಿಗೆ ಕೇಳಿದ್ದಾರೆ.
ಒಬ್ಬ ವಿದ್ಯಾರ್ಥಿ ಬರೆದ ಟಿಪ್ಪಣಿಯು ಗುಲಾಟಿಯ ಹೃದಯ ಕರಗಿಸಿದೆ. ಇದನ್ನು ಫೋಟೋ ಸಹಿತ ಅವರು ಟ್ವೀಟ್ ಮಾಡಿದ್ದಾರೆ. ವಿದ್ಯಾರ್ಥಿಗಳು ಕೆಲವೊಮ್ಮೆ ಅವರ ಆಲೋಚನೆಗಳಿಂದ ನಿಮ್ಮನ್ನು ವಿಸ್ಮಯಗೊಳಿಸುತ್ತಾರೆ. ಯಾರಾದರೂ ಕ್ಷಮೆಯನ್ನು ವ್ಯಕ್ತಪಡಿಸಬೇಕಾದ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳುತ್ತಿರುವವರಿಗೆ ಕ್ಷಮಿಸಿ ಎಂಬ ಟಿಪ್ಪಣಿ ಬರೆಯಲು ತಾನು ವಿದ್ಯಾರ್ಥಿಗಳನ್ನು ಕೇಳಿದೆ. ವಿದ್ಯಾರ್ಥಿಯೊಬ್ಬ ಸೇನೆಯ ಅಧಿಕಾರಿ ಎಂದು ಕಲ್ಪಿಸಿಕೊಂಡು ಬರೆದಿದ್ದಾನೆ. ತನ್ನ ಕರ್ತವ್ಯವೇ ನನ್ನ ಆದ್ಯತೆ. ಸೇನಾ ಸಿಬ್ಬಂದಿಗೆ ಸೆಲ್ಯೂಟ್ ಎಂಬ ಶೀರ್ಷಿಕೆ ನೀಡಲಾಗಿದೆ.
ತನ್ನ ಸಹೋದರಿಯ ಮದುವೆಗೆ ಸಿದ್ಧತೆಗಳಾಗುತ್ತಿದ್ದರೆ, ತಾನು ರಜೆ ಪಡೆದು ಮದುವೆಗೆ ಹಾಜರಾಗುವ ಸ್ಥಿತಿಯಲ್ಲಿಲ್ಲ. ತನ್ನ ದೇಶವನ್ನು ಕಾಯುವುದು ತನ್ನ ಕರ್ತವ್ಯವಾಗಿದೆ ಎಂಬಂತಹ ಟಿಪ್ಪಣಿಯನ್ನು ವಿದ್ಯಾರ್ಥಿ ಬರೆದಿದ್ದು, ಇದು ನೆಟ್ಟಿಗರ ಕಣ್ಣಂಚನ್ನು ತೇವಗೊಳಿಸಿದೆ.
— Manu Gulati (@ManuGulati11) May 6, 2022