ಉತ್ತರ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಸಿಎಂ ಆಗಿ ಯೋಗಿ ಆದಿತ್ಯನಾಥ್ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಉತ್ತರ ಪ್ರದೇಶದ ಹೊಸ ಕ್ಯಾಬಿನೆಟ್ನಲ್ಲಿ ಕೆಲವು ಹೊಸ ಮುಖಗಳು ಸೇರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಸುರೇಶ್ ಖನ್ನಾ ಸೇರಿದಂತೆ ವಿವಿಧ ಹಳೆಯ ಮುಖಗಳನ್ನೂ ಹೊಂದಿದೆ. ಸಂಪುಟದಲ್ಲಿ ಹೊಸಬರಿಗೆ ದಾರಿ ಮಾಡಿಕೊಡುವ ಸಲುವಾಗಿ ಯೋಗಿ ಆದಿತ್ಯನಾಥ್ ಸಂಪುಟದಿಂದ 26 ಮಂದಿ ಸಚಿವರ ಹೆಸರುಗಳನ್ನು ಕೈಬಿಡಲಾಗಿದೆ.
ಸಂಪುಟದಿಂದ ಕೈಬಿಟ್ಟವರಲ್ಲಿ ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ, ಮಾಜಿ ಸಚಿವರಾದ ಸತೀಶ್ ಮಹಾನಾ, ಸಿದ್ಧಾರ್ಥ್ ನಾಥ್ ಸಿಂಗ್, ಜೈ ಪ್ರತಾಪ್ ಸಿಂಗ್, ನೀಲಕಂಠ ತಿವಾರಿ, ಜೈ ಪ್ರಕಾಶ್ ನಿಶಾದ್ ಮತ್ತು ಜೈ ಕುಮಾರ್ ಸಿಂಗ್ ಸೇರಿದ್ದಾರೆ.
ಹಿರಿಯ ನಾಯಕ ದಿವಂಗತ ಲಾಲ್ ಜಿ ಟಂಡನ್ನ ಪುತ್ರ ಹಾಗೂ ಮೂರು ಬಾರಿ ಶಾಸಕರಾಗಿರುವ ಆಶುತೋಷ್ ಟಂಡನ್, ಮಥುರಾದಿಂದ 2 ಬಾರಿ ಶಾಸಕರಾಗಿರುವ ಶ್ರೀಕಾಂತ್ ಶರ್ಮಾ ಸೇರಿದಂತೆ ಹಲವರು ಯೋಗಿ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.