ಭಾರತದ ಅನೇಕ ಕಡೆಗಳಲ್ಲಿ ಬೇಸಿಗೆಯ ತಿಂಗಳು ಬಂತೆಂದ್ರೆ ಸಾಕು ಜನ ಬಿಸಿಲಿ ಝಳಕ್ಕೆ ಬೆವರಿ ಹೋಗುತ್ತಾರೆ. ಅದಕ್ಕಾಗಿಯೇ ಹಲವಾರು ಮಂದಿ ಚಿಲ್ ಮಾಡಲು ಹಿಮಾಲಯ ಪರ್ವತದತ್ತ ತೆರಳುತ್ತಾರೆ. ಪರ್ವತಗಳು ಸಹಜವಾಗಿ ತುಂಬಾ ಸುಂದರವಾಗಿರುತ್ತದೆ. ಹಾಗೆಯೇ ನೋಡುತ್ತಾ ಡಾನ್ಸ್ ಮಾಡಬೇಕೆಂದೆನಿಸೋದು ಸುಳ್ಳಲ್ಲ. ಇದೀಗ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಯುವತಿಯೊಬ್ಬರು ಬಾಲಿವುಡ್ ಹಾಡಿಗೆ ಹಿಮಾಚಲ ಪ್ರದೇಶದ ಸುಂದರವಾದ ಪರ್ವತಗಳ ಸುತ್ತಲೂ ನೃತ್ಯ ಮಾಡುತ್ತಾ, ತಂಪಾದ ವಾತಾವರಣವನ್ನು ಆನಂದಿಸಿದ್ದಾರೆ. ಹಿಮಾಚಲ ಪ್ರದೇಶದ ರೋಹ್ಟಾಂಗ್ ಪಾಸ್ನಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಸುಂದರವಾದ ಹಿಮದಿಂದ ಆವೃತವಾದ ಪರ್ವತಗಳ ನಡುವೆ ಟಿವಿ ನಿರೂಪಕಿ ಆಂಚಲ್ ಗೋಸ್ವಾಮಿ ಅವರು ಜಬ್ ವಿ ಮೆಟ್ ಹಾಡಿನ ಯೇ ಇಷ್ಕ್ ಹೇ ಜನ್ನತ್ ದಿಖಾಯೆಗೆ ಬೊಂಬಾಟ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.
ಆಂಚಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, 29,000 ಕ್ಕೂ ಹೆಚ್ಚು ಲೈಕ್ಸ್ ಮತ್ತು ಟನ್ ಗಳಷ್ಟು ಕಾಮೆಂಟ್ ಗಳನ್ನು ಗಳಿಸಿದೆ. ಆಕೆಯ ಮುದ್ದಾದ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಕಾಮೆಂಟ್ ವಿಭಾಗವು ಹೃದಯ ಮತ್ತು ಪ್ರೀತಿಯ ಎಮೋಜಿಗಳಿಂದ ತುಂಬಿದೆ.