ಬೆಂಗಳೂರು: ಡ್ರೋಣ್ ಪ್ರತಾಪ್ ವಿರುದ್ಧ ಆಕ್ಷೇಪಾರ್ಹ ವಿಡಿಯೋಗಳನ್ನು ಹಾಕಿದ ಯೂಟ್ಯೂಬರ್ ಗಳ ಮೇಲೆ ಡ್ರೋಣ್ ಪ್ರತಾಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ತನ್ನ ವಿರುದ್ಧ ಟೀಕಾತ್ಮಕ ವಿಡಿಯೋಗಳನ್ನು ಪ್ರಸಾರ ಮಾಡಿದ್ದಕ್ಕೆ ಹಾಗೂ ತಮ್ಮ ಡ್ರೋಣ್ ಕಂಪನಿಯ ಲೋಗೋ, ಫೋಟೋಗಳನ್ನು ಬಳಸಿ ಇಲ್ಲಸಲ್ಲದ ಸುದ್ದಿಗಳನ್ನು ಕೆಲ ಯೂಟ್ಯೂಬ್ ಚಾನಲ್ ಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೂಟ್ಯೂಬರ್ ಗಳ ವಿರುದ್ಧ 30 ಲಕ್ಷ ರೂಪಾಯಿ ಮಾನನಷ್ಟ ಕೇಸ್ ದಾಖಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಡ್ರೋಣ್ ಪ್ರತಾಪ್ ಫೇಸ್ ಬುಕ್ ವಿಡಿಯೋ ಹಂಚಿಕೊಂಡಿದ್ದು, ನನ್ನ ವಿರುದ್ಧ ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿರುವ ಕಾರಣಕ್ಕೆ ಹಾಗೂ ನಮ್ಮ ಸಂಸ್ಥೆಯ ಲೋಗೋ ಗಳನ್ನು ಬಳಸಿ ಅಪಪ್ರಚಾರ ಮಾಡುತ್ತಿರುವ ಕಾರಣಕ್ಕೆ ಯೂಟ್ಯೂಬರ್ ಗಳ ವಿರುದ್ಧ ಮಾನನಷ್ಟ ಕೇಸ್ ದಾಖಲಿಸುತ್ತಿದ್ದೇನೆ. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ, ಆದರೆ ತಾಳ್ಮೆಗೂ ಒಂದು ಮಿತಿ ಇದೆ ಹಾಗಾಗಿ ಕಾನೂನು ಹೋರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಮಧು, ಸಂದೀಪ್, ಉಡನ್ ಬಾವ್ಯಾ, ದಿವ್ಯಾ ವಸಂತ ಸೇರಿದಂತೆ ಕೆಲ ಯೂಟ್ಯೂಬರ್ ಗಳು ಇಲ್ಲಸಲ್ಲದ ಆರೋಪ ಮಾಡಿ ವೈಯಕ್ತಿಕವಾಗಿ ನಿಂದನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಕೇಸ್ ಫೈಲ್ ಮಾಡುವುದಾಗಿ ತಿಳಿಸಿದ್ದಾರೆ.