
ಇದೀಗ, ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮಹಿಳಾ ನೃತ್ಯಗಾರ್ತಿಯೊಂದಿಗೆ ಡಾನ್ಸ್ ಮಾಡುವಾಗ ವ್ಯಕ್ತಿಯೊಬ್ಬ ಕೈಯಲ್ಲಿ ಪಿಸ್ತೂಲ್ ಹಿಡಿದಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಮದುವೆಯೊಂದರಲ್ಲಿ ನಡೆದ ಘಟನೆ ಇದಾಗಿದೆ ಎನ್ನಲಾಗಿದೆ.
ಪಿಸ್ತೂಲಿನ ಟ್ರಿಗ್ಗರ್ ಮೇಲೆ ಬೆರಳುಗಳನ್ನಿಟ್ಟುಕೊಂಡು ಆ ವ್ಯಕ್ತಿ ನೃತ್ಯ ಮಾಡಿದ್ದಾನೆ. ಈ ವೇಳೆ ಆತ ಮಹಿಳಾ ಡಾನ್ಸರ್ ಮೇಲೆ ಗುರಿಯಿಟ್ಟಿದ್ದಾನೆ. ಬಳಿಕ ಆಕೆಯ ಕಿವಿಯಲ್ಲಿ ಏನೋ ಮಾತುಗಳನ್ನು ಹೇಳಿದ್ದಾನೆ. ಇದಕ್ಕೆ ನಗೆ ಬೀರಿದ ಡಾನ್ಸರ್ ನೃತ್ಯ ಮಾಡುವುದನ್ನು ಮುಂದುವರೆಸಿದ್ದಾಳೆ. ಯುವಕ ಕೂಡ ನೃತ್ಯಗಾರ್ತಿಯ ಜೊತೆ ಡಾನ್ಸ್ ಮಾಡುತ್ತಾ ಪಿಸ್ತೂಲ್ ಅನ್ನು ಕೈಯಿಂದ ಬೀಸಿದ್ದಾನೆ.
ಪತ್ರಕರ್ತರೊಬ್ಬರು ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಂದು ವೇಳೆ ಪಿಸ್ತೂಲ್ ಲೋಡ್ ಆಗಿದ್ದರೆ, ಆಕಸ್ಮಾತ್ ಆಗಿ ಟ್ರಿಗ್ಗರ್ ಅನ್ನು ತಪ್ಪಾಗಿ ಒತ್ತಿದರೆ ಏನಾಗಬಹುದು ಎಂದು ಯೋಚಿಸಿ ಎಂದು ಪ್ರಶ್ನಿಸಿದ್ದಾರೆ. ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನಡೆದ ಘಟನೆ ಇದಾಗಿದೆ ಎನ್ನಲಾಗಿದೆ. ಈ ವೈರಲ್ ವಿಡಿಯೋ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಳಕೆದಾರರು ಒತ್ತಾಯಿಸಿದ್ದಾರೆ.