
ಜೆನ್ ಎಂಬ ಯುವತಿ ಪಾರ್ಕ್ನಲ್ಲಿ ಕುಳಿತು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡುತ್ತಾ, ಕೋತಿಗಳ ತುಂಟಾಟವನ್ನು ತೋರಿಸಿದ್ದಾರೆ. ಎರಡು ಕೋತಿಗಳಲ್ಲಿ ಒಂದು ಮಂಗವು ಅವಳ ಕಡೆಗೆ ಓಡುತ್ತಾ ಬಂದಿದೆ. ಮೆಲ್ಲನೆ ಆಕೆಯನ್ನು ನೋಡಿದ ಕಪಿರಾಯ, ಯುವತಿ ಧರಿಸಿದ್ದ ಸ್ಫಟಿಕ ಶಿಲೆಯ ಸ್ಫಟಿಕ ಹಾರವನ್ನು ಮುಟ್ಟುತ್ತದೆ. ಮತ್ತು ಅದನ್ನು ಹಾಗೆಯೇ ಬಿಟ್ಟು ಹಿಂತಿರುಗುತ್ತದೆ. ಅವಳು ಕೋತಿಗೆ ಹಾಯ್ ಎಂದು ಹೇಳುತ್ತಾಳೆ. ಅಲ್ಲದೆ ಹಾರವನ್ನು ಪರೀಕ್ಷಿಸಲು ಅದಕ್ಕೆ ಅವಕಾಶ ಮಾಡಿಕೊಡುತ್ತಾಳೆ.
ಈ ವೇಳೆ ಯುವತಿ, ಮಂಗವು ತನ್ನ ಸ್ಫಟಿಕವನ್ನು ಇಷ್ಟಪಡುತ್ತದೆ ಎಂದು ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ, ಮತ್ತೊಂದು ಕೋತಿ ಆಕೆಯ ಹತ್ತಿರ ಬಂದಿದೆ. ಈ ಕೋತಿಗೆ ಯುವತಿ ಧರಿಸಿದ್ದ ಉಡುಪಿನತ್ತ ಆಕರ್ಷಿತಗೊಂಡಂತೆ ಕಾಣುತ್ತದೆ. ಯಾಕೆಂದರೆ ಆಕೆ ಧರಿಸಿದ್ದ ನೀಲಿ ಬಣ್ಣದ ಉಡುಪನ್ನು ಹಿಂದಿನಿಂದ ಮೇಲಕ್ಕೆತ್ತುತ್ತದೆ. ಇದು ಆಕೆಗೆ ನಗು ತರಿಸಿದೆ.
ಕೋತಿಯು ಯುವತಿಯ ಉಡುಪಿನ ಕೆಳಗೆ ನೋಡಲು ಪ್ರಯತ್ನಿಸುತ್ತದೆ. ಈ ವೇಳೆ ಆಕೆ ನಗುತ್ತಾ, ತನ್ನ ಉಡುಪನ್ನು ಮೇಲಕ್ಕೆತ್ತದಂತೆ ತಡೆಯುತ್ತಾಳೆ. ಅಲ್ಲಿಂದ ಮಂಗ ಓಡಿ ಹೋಗುತ್ತದೆ. ಯುವತಿಯು ಕೋತಿಯು ಏನು ಮಾಡಲು ಪ್ರಯತ್ನಿಸಿದೆ ಎಂಬುದನ್ನು ತಡೆಯಲಾಗದೆ ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಕೂಡ ನಗೆಗಡಲಲ್ಲಿ ತೇಲಿಸಿದೆ.