ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋ, ವಿಡಿಯೋ ಶೂಟ್ ಮಾಡುವುದು ಸಾಮಾನ್ಯ. ಮದುವೆಯ ಆಹ್ವಾನ ಪತ್ರಿಕೆಯಲ್ಲೂ ಕೂಡ ವಿಭಿನ್ನವಾಗಿ ವಿಡಿಯೋ ಹಾಗೂ ಫೋಟೋಶೂಟ್ ನಡೆಸಲಾಗುತ್ತದೆ. ಹಾಗೆಯೇ ಇದೀಗ ಆನ್‌ಲೈನ್‌ನಲ್ಲಿ ಮದುವೆಯ ಆಹ್ವಾನ ಪತ್ರಿಕೆಯ ವಿಡಿಯೋ ಭಾರಿ ಸದ್ದು ಮಾಡಿದೆ.
ಹೌದು, ಈಗೆಲ್ಲಾ ವಾಟ್ಸಾಪ್ ನಲ್ಲಿ ಮದುವೆಯ ಕರೆಯೋಲೆಯನ್ನು ಕಳುಹಿಸಲಾಗುತ್ತದೆ. ಇದಕ್ಕೆಂದೇ ವಿಭಿನ್ನವಾಗಿ ಕರೆಯೋಲೆಯನ್ನು ಸಿದ್ಧಪಡಿಸಲಾಗುತ್ತದೆ. ಮಲಯಾಳಂನ ಸೂಪರ್ ಹೀರೋ ಚಿತ್ರ ಮಿನ್ನಲ್ ಮುರಳಿಯಿಂದ ಸ್ಫೂರ್ತಿ ಪಡೆದು, ಈ ವಿಭಿನ್ನ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಆಹ್ವಾನದ ವಿಡಿಯೋ ಸಿಕ್ಕಾಪಟ್ಟೆ ಧೂಳೆಬ್ಬಿಸಿದೆ.
ವಿಡಿಯೋದಲ್ಲಿ, ಯುವತಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಳ್ಳನೊಬ್ಬ ಆಕೆಯ ಪರ್ಸ್ ಕದ್ದು ಓಡಿಹೋಗಿದ್ದಾನೆ. ಸೂಪರ್ ಹೀರೋ ಮಿನ್ನಲ್ ಮುರಳಿಯಂತೆ ವೇಷ ಧರಿಸಿದ ವ್ಯಕ್ತಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಕಳ್ಳನನ್ನು ಸೆರೆಹಿಡಿದು ಆತನ ಬಳಿಯಿದ್ದ ಪರ್ಸ್ ಅನ್ನು ಮರಳಿಗೆ ಯುವತಿಗೆ ನೀಡಿದ್ದಾನೆ. ನಂತರ ಸೂಪರ್ ಹೀರೋ ವೇಷ ಧರಿಸಿದ ವ್ಯಕ್ತಿ ಯುವತಿಯನ್ನು ಕಾರಿಗೆ ಡಿಕ್ಕಿ ಹೊಡೆಯುವುದರಿಂದ ರಕ್ಷಿಸಿದ್ದಾನೆ. ನಂತರ ಅವನು ಅವಳೊಂದಿಗೆ ಸಮಯ ಕಳೆಯುತ್ತಾನೆ.
ವಿಡಿಯೋದ ಕೊನೆಗೆ ವ್ಯಕ್ತಿ ಮತ್ತು ಯುವತಿ ಮುಖಾಮುಖಿಯಾಗುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಅಲ್ಲಿ ತಮ್ಮ ಮದುವೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಇದು ಜನವರಿ 23 ರಂದು ನಡೆಯಲಿರುವ ಅಮಲ್ ಮತ್ತು ಅಂಜು ಎಂಬುವವರ ಮದುವೆ ಕರೆಯೋಲೆಯಾಗಿದೆ. ಈ ಸೃಜನಾತ್ಮಕ ಪರಿಕಲ್ಪನೆಯು ಛಾಯಾಗ್ರಾಹಕ ಜಿಬಿನ್ ಜಾಯ್ ಅವರಿಗೆ ಸಲ್ಲುತ್ತದೆ.
ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 4.6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇದು ಹಾಸ್ಯನಟ ಸುನಿಲ್ ಗ್ರೋವರ್ ಅವರ ಗಮನ ಸೆಳೆದಿದೆ. ಇದು ಎಂದೆಂದಿಗೂ ಅತ್ಯುತ್ತಮ ಮದುವೆಯ ಆಮಂತ್ರಣವಾಗಿದೆಎಂದು ಅವರು ತಿಳಿಸಿದ್ದಾರೆ. ನೆಟ್ಟಿಗರು ಕೂಡ ಛಾಯಾಗ್ರಾಹಕನ ಅದ್ಭುತ ಪರಿಕಲ್ಪನೆಗೆ ಸಲಾಂ ಎಂದಿದ್ದಾರೆ.