
ಕಾಲ್ಗೆಜ್ಜೆ ಎಂದರೆ ಸಾಂಪ್ರದಾಯಿಕ ಮಾದರಿಯ ಬೆಳ್ಳಿಯ ಗೆಜ್ಜೆಯಲ್ಲ. ಈಗ ಆಂಟಿಕ್ ಕಾಲ್ಗೆಜ್ಜೆಗಳು, ಫ್ಯಾನ್ಸಿ ಕಾಲ್ಗೆಜ್ಜೆಗಳು, ನವೀನ ಶೈಲಿಯ ಕಾಲ್ಗೆಜ್ಜೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಬಟ್ಟೆಯ ಬಣ್ಣಕ್ಕೆ ಮ್ಯಾಚ್ ಆಗುವ, ಧರಿಸಲು ಆರಾಮವೆನಿಸುವ ಕಾಲ್ಗೆಜ್ಜೆಯ ಆಯ್ಕೆ ಹೆಚ್ಚು ಸೂಕ್ತ.
ಬೆಳ್ಳಿ, ಬ್ಲಾಕ್ ಮೆಟಲ್, ಗೋಲ್ಡನ್ ಕಲರ್ ಹೀಗೆ ನಾನಾ ರೀತಿಯ ಬಗೆ ಬಗೆಯ ವಿನ್ಯಾಸದ ಗೆಜ್ಜೆಗಳು ಕನ್ಯೆಯರಿಗೆ ಪ್ರಿಯವಾಗತೊಡಗಿವೆ. ಸಮಾರಂಭಗಳಿಗೆ ಕಾಲಿನ ಅಂದ ಹೆಚ್ಚಿಸಲು ಬೇಕೆ ಬೇಕು ಕಾಲ್ಗೆಜ್ಜೆಗಳು.
