alex Certify ಯುವಜನತೆಗೆ ಸ್ಪೂರ್ತಿ ಈ ವೃದ್ಧೆ: ಕೇರಳದ ಸಾಕ್ಷರತೆ ಪರೀಕ್ಷೆಯಲ್ಲಿ ಟಾಪರ್ ಆದ 108ರ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಜನತೆಗೆ ಸ್ಪೂರ್ತಿ ಈ ವೃದ್ಧೆ: ಕೇರಳದ ಸಾಕ್ಷರತೆ ಪರೀಕ್ಷೆಯಲ್ಲಿ ಟಾಪರ್ ಆದ 108ರ ಮಹಿಳೆ

ಸಾಧನೆ ಮಾಡಲು ವಯಸ್ಸಿನ ಹಂಗಿಲ್ಲ ಅನ್ನೋದನ್ನು ಇಲ್ಲೊಬ್ಬರು ವೃದ್ಧೆ ಸಾಧಿಸಿ ತೋರಿಸಿದ್ದಾರೆ. ಕೇರಳ ರಾಜ್ಯ ನಡೆಸುತ್ತಿರುವ ಸಾಕ್ಷರತಾ ಕಾರ್ಯಕ್ರಮದಲ್ಲಿ ತಮಿಳುನಾಡಿನ 108 ವರ್ಷದ ಮಹಿಳೆಯೊಬ್ಬರು ಟಾಪರ್ ಆಗಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.

1915 ರಲ್ಲಿ ತಮಿಳುನಾಡಿನ ತೇಣಿ ಜಿಲ್ಲೆಯ ಕುಂಬಮ್‌ನಲ್ಲಿ ಜನಿಸಿದ ಕಮಲಾಕನ್ನಿ ಅವರು ತಮ್ಮ ಆರಂಭಿಕ ದಿನಗಳಲ್ಲಿ ನೆರೆಯ ರಾಜ್ಯ ಕೇರಳದ ಏಲಕ್ಕಿ ಹೊಲದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇದೀಗ ಸಾಕ್ಷರತೆ ಪರೀಕ್ಷೆಯಲ್ಲಿ ಟಾಪರ್ ಆಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ ಸಮೀಕ್ಷೆಯ ಪ್ರಕಾರ, ಕೇರಳವು ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಎಂದೇ ಖ್ಯಾತಿ ಪಡೆದಿದೆ. ಇಲ್ಲಿ ಅತಿ ಹೆಚ್ಚು ಸಾಕ್ಷರತೆಯ ಪ್ರಮಾಣ ಶೇ. 96.2ರಷ್ಟಿದೆ. ಕೇರಳದಲ್ಲಿ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ, ಜ್ಞಾನವನ್ನು ಸಂಪಾದಿಸುವ ಗುರಿಯೊಂದಿಗೆ ಮತ್ತು ವಯಸ್ಸಾದವರು ಸಹ ಹೆಬ್ಬೆಟ್ಟು ಬದಲು ಸಹಿ ಹಾಕಬೇಕು ಎಂಬ ಉದ್ದೇಶದಿಂದ ಹಿರಿಯರಿಗೆ ಶಿಕ್ಷಣವನ್ನು ಕಲಿಸಲಾಗುತ್ತಿದೆ.

ಕೇರಳದ ಏಲಕ್ಕಿ ತೋಟದಲ್ಲಿ ಕೆಲಸ ಮಾಡಲು ತಮಿಳುನಾಡಿನ ಥೇಣಿಯಿಂದ ಸ್ಥಳಾಂತರಗೊಂಡ 108 ವರ್ಷದ ಕಮಲಾಕನ್ನಿ ಅವರು ಈ ಕಾರ್ಯಕ್ರಮದಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಎರಡನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ತನ್ನ ಕುಟುಂಬದೊಂದಿಗೆ ಕೇರಳದ ಗಡಿಯಲ್ಲಿರುವ ವಂದನ್ಮೇಡು ಪ್ರದೇಶಕ್ಕೆ ತೆರಳಿದ ಕಮಲಾಕನ್ನಿ ಸ್ಥಳಾಂತರಗೊಂಡರು. ತನ್ನ ಬಡ ಕುಟುಂಬವನ್ನು ಪೋಷಿಸಲು ಏಲಕ್ಕಿ ತೋಟದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ರು.

ಈ ಮೂಲಕ ಕಮಲಾಕನ್ನಿ ತನ್ನ 80 ವರ್ಷಗಳ ಜೀವನವನ್ನು ಏಲಕ್ಕಿ ಹೊಲಗಳಲ್ಲಿ ದುಡಿಮೆಯಲ್ಲೇ ಕಳೆದರು. ಜಮೀನಿನಲ್ಲಿ ನಿರಂತರ ಕೆಲಸ ಮಾಡುತ್ತಿರುವುದರಿಂದ ಆಕೆಗೆ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

108 ವರ್ಷ ವಯಸ್ಸಿನ ಈ ಕಮಲಾಕನ್ನಿ, ಉತ್ತಮ ಶ್ರವಣ ಮತ್ತು ದೃಷ್ಟಿ ಹೊಂದಿದ್ದು, ಕೇರಳದ ಸಾಕ್ಷರತಾ ಕಾರ್ಯಕ್ರಮಕ್ಕೆ ದಾಖಲಾಗಿ, ಅಧ್ಯಯನ ಮಾಡಲು ಪ್ರಾರಂಭಿಸಿದ್ರು. ಶಿಕ್ಷಣದ ಕಡೆಗೆ ಅವರ ಸಮರ್ಪಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕಮಲಾಕನ್ನಿ ತಮಿಳು ಮತ್ತು ಮಲಯಾಳಂ ಎರಡರಲ್ಲೂ ಬರೆಯುವುದನ್ನು ಅಭ್ಯಾಸ ಮಾಡಿದ್ರು. ಅಲ್ಲದೆ, ಸಾಕ್ಷರತಾ ಯೋಜನೆಯ ಪರೀಕ್ಷೆಯಲ್ಲಿ ಅವರು 100 ರಲ್ಲಿ 97 ಅಂಕಗಳನ್ನು ಗಳಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...