ಇತ್ತೀಚಿನ ದಿನಗಳಲ್ಲಿ ಬೆನ್ನು ನೋವಿನ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿದೆ. ಯಂಗ್ ಏಜ್‌ನಲ್ಲಿಯೇ ಅನೇಕರು ದೀರ್ಘಕಾಲದ ಬೆನ್ನು ನೋವಿನಿಂದ ನರಳುತ್ತಿದ್ದಾರೆ. ಭಾರತದಲ್ಲಿ ಪ್ರತಿ ಐವರಲ್ಲಿ ಒಬ್ಬರು ಬೆನ್ನು ನೋವಿನ ಗಂಭೀರ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ತಜ್ಞರ ಪ್ರಕಾರ ಯುವಜನರಲ್ಲಿ ಈ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಬೆನ್ನು ನೋವು ಪ್ರಮುಖ ಸಾಮಾಜಿಕ ಆರೋಗ್ಯ ಸಮಸ್ಯೆಯಾಗಿ ಹೊರಹೊಮ್ಮಿದೆ.
ಬೆನ್ನು ನೋವು 3 ತಿಂಗಳಿಗಿಂತ ಹೆಚ್ಚು ಕಾಲ ಇದ್ದರೆ, ಅದು ದೀರ್ಘಕಾಲದ ವರ್ಗಕ್ಕೆ ಬರುತ್ತದೆ.ಬೆನ್ನು ನೋವಿನಿಂದ ಬಾಧಿತರಾದ ರೋಗಿಗಳು ಶೀಘ್ರವಾಗಿ ಗಂಭೀರ ಸ್ಥಿತಿಯನ್ನು ತಲುಪುತ್ತಿದ್ದಾರೆ. ಇದು ಅವರ ಸಾಮಾನ್ಯ ಮತ್ತು ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆತಂಕಕಾರಿ ಸಂಗತಿಯೆಂದರೆ ಹೆಚ್ಚಿನ ಯುವಕರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈಗ 30 ಅಥವಾ 40 ವರ್ಷ ವಯಸ್ಸಿನವರೂ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆದಾಗ್ಯೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡರೆ ಮತ್ತು ವ್ಯಾಯಾಮವನ್ನು ಅಳವಡಿಸಿಕೊಂಡರೆ ಈ ರೋಗವನ್ನು ನಿಯಂತ್ರಿಸಬಹುದು.
ವಿಟಮಿನ್ ಡಿ ಕೊರತೆ
ಆಧುನಿಕ ಜೀವನಶೈಲಿಯಿಂದಾಗಿ ನಮ್ಮನ್ನು ನಾವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುತ್ತಿಲ್ಲ. ಪರಿಣಾಮ ದೇಹಕ್ಕೆ ಸಾಕಷ್ಟು ವಿಟಮಿನ್ ಡಿ ಸಿಗುವುದಿಲ್ಲ, ಇದು ಬೆನ್ನುನೋವಿಗೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಹೋಗಲಾಡಿಸಲು ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಇದರೊಂದಿಗೆ ದೇಹವು ಸಾಕಷ್ಟು ವಿಟಮಿನ್ ಡಿ ಮತ್ತು ಇತರ ಪೋಷಕಾಂಶಗಳನ್ನು ಪಡೆಯುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಒತ್ತಡವನ್ನು ಕಡಿಮೆ ಮಾಡಲು ಧ್ಯಾನವನ್ನು ಅಭ್ಯಾಸ ಮಾಡುವ ಮೂಲಕವೂ ಬೆನ್ನು ನೋವಿನಿಂದ ಮುಕ್ತಿ ಪಡೆಯಬಹುದು. ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವುದು ಸಹ ಮುಖ್ಯ.ಬೆನ್ನು ನೋವಿನಿಂದ ದೂರವಿರಲು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡಬೇಕು. ಅಣಬೆ, ಮೀನು (ತಾಜಾ ಅಥವಾ ಒಣಗಿದ), ಮೊಟ್ಟೆಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಸರು ಮತ್ತು ಚೀಸ್ಮುಂತಾದವುಗಳನ್ನು ಸೇವನೆ ಮಾಡಬೇಕು.
ಇದರ ಜೊತೆಗೆ ಖಾದ್ಯ ತೈಲಗಳಾದ ಕಡಲೆ ಎಣ್ಣೆ, ಆಕ್ರೋಡು ಎಣ್ಣೆ ಮತ್ತು ಎಳ್ಳಿನ ಎಣ್ಣೆಯನ್ನು ಸೇವನೆ ಮಾಡಿ. ವಿಟಮಿನ್ ಡಿ ಕೊರತೆಯಿದ್ದರೆ ಈ ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡುತ್ತ ಬಂದರೆ ಅದನ್ನು ನಿವಾರಿಸಬಹುದು. ವೈದ್ಯರನ್ನೂ ಒಮ್ಮೆ ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.