alex Certify ಯುವಕನನ್ನು ಅಪಹರಿಸಿ ಮೂತ್ರ ಕುಡಿಸಿದ ದುಷ್ಕರ್ಮಿಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನನ್ನು ಅಪಹರಿಸಿ ಮೂತ್ರ ಕುಡಿಸಿದ ದುಷ್ಕರ್ಮಿಗಳು….!

ಜೈಪುರ : ಯುವಕನನ್ನು ಅಪಹರಿಸಿ, ಬಲವಂತವಾಗಿ ಮದ್ಯ ಕುಡಿಸಿದ್ದಲ್ಲದೆ, ಮೂತ್ರವನ್ನೂ ಕುಡಿಸಿ ವಿಕೃತಿ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.

ಜೈಪುರ ಸಮೀಪದ ಚೂರು ಜಿಲ್ಲೆಯ ರುಖಾಸರ್ ಎಂಬಲ್ಲಿಯೇ ಈ ಘಟನೆ ನಡೆದ ಕುರಿತು ವರದಿಯಾಗಿದೆ. ದಲಿತ ಯುವಕನನ್ನು ಅಪಹರಿಸಿದ 8 ಜನರ ತಂಡ ಈ ಕೃತ್ಯ ಎಸಗಿದೆ ಎನ್ನಲಾಗಿದೆ. ರಾಕೇಶ್ ಮೇಘವಾಲ್ ಎಂಬ ಯುವಕನನ್ನು ಅಪಹರಿಸಿ ಈ ರೀತಿ ಕೃತ್ಯ ಎಸಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದು, 6 ಜನರಿಗಾಗಿ ಹುಡುಕಾಟ ನಡೆಸಿದ್ದಾರೆ.

ಬೀರಬಲ್, ಉಮೆಶ್ ಬಂಧಿತರು. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಎನ್ನಲಾಗಿದೆ. ಮೇಲ್ವರ್ಗ ಸಮುದಾಯದ 8 ಜನರು, ದಲಿತ ವ್ಯಕ್ತಿಯನ್ನು ಅಪಹರಿಸಿ, ಹೊಲಕ್ಕೆ ಕರೆದೊಯ್ದು ಮೊದಲು ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಆ ನಂತರ ಅದೇ ಬಾಟಲ್ ನಲ್ಲಿ ಮೂತ್ರ ವಿಸರ್ಜಿಸಿ ಕುಡಿಸಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ.

ಈ ಕುರಿತು ಯುವಕ ರತನ್ ಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಯುವಕನ ಬೆನ್ನಿಗೆ ಗಾಯಗಳಾಗಿವೆ ಎನ್ನಲಾಗಿದೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...