ಯುರೋಪಿನಲ್ಲಿ ಹವಾಮಾನ ವೈಪರಿತ್ಯ ಮಿತಿಮೀರಿದೆ. ಕೆಲ ವಾರಗಳ ಹಿಂದಷ್ಟೇ ಅತೀ ಹೆಚ್ಚು ತಾಪಮಾನ ದಾಖಲಿಸಿದ್ದ ಯುರೋಪ್ನಲ್ಲಿ ಇದೀಗ ತೀವ್ರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆಯನ್ನ ಎದುರಿಸುತ್ತಿರುವ ಜರ್ಮನಿಯಲ್ಲಿ ಸಾವಿನ ಸಂಖ್ಯೆ 156ಕ್ಕೆ ಏರಿಕೆಯಾಗಿದೆ.
ಪಶ್ಚಿಮ ಯುರೋಪ್ನಲ್ಲಿ ಪ್ರವಾಹದಿಂದ ಜೀವ ತೆತ್ತವರ ಸಂಖ್ಯೆ 183ಕ್ಕೆ ತಲುಪಿದೆ. ಪಶ್ಚಿಮ ಜರ್ಮನಿಯ ಪ್ಯಾಲಟಿನೇಟ್ ಎಂಬ ರಾಜ್ಯವು ಪ್ರವಾಹಕ್ಕೆ ಅತ್ಯಂತ ಭೀಕರವಾಗಿ ತುತ್ತಾಗಿದ್ದು ಈ ರಾಜ್ಯವೊಂದರಲ್ಲೇ 110 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ಅನೇಕರು ಮನೆ ಮಠಗಳನ್ನು ಕಳೆದುಕೊಂಡಿದ್ದರೆ ಇನ್ನು ಕೆಲವರು ನಾಪತ್ತೆಯಾಗಿದ್ದಾರೆ. ಪರಿಸ್ಥಿತಿ ವಿಪರೀತ ಬಿಗಡಾಯಿಸಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸ್ತಾ ಇದ್ದಾರೆ.
ಭಾರೀ ನೆರೆಯಿಂದಾಗಿ ಪಶ್ಚಿಮ ಜರ್ಮನಿ ಹಾಗೂ ಬೆಲ್ಜಿಯಂನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ರಕ್ಷಣಾ ಅಧಿಕಾರಿಗಳು ಈಗಾಗಲೇ ರಕ್ಷಣಾ ಕಾರ್ಯವನ್ನ ನಡೆಸುತ್ತಿದ್ದಾರೆ. ಮಳೆ ಕಡಿಮೆಯಾದರೂ ಸಹ ಪ್ರವಾಹದ ಭೀತಿ ಇನ್ನೂ ಕೆಲ ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಜನತೆಗೆ ಎಚ್ಚರಿಕೆ ನೀಡಿದ್ದಾರೆ.
ಜರ್ಮನಿ ಹಾಗೂ ಬೆಲ್ಜಿಯಂನಲ್ಲಿ ನೆರೆಹಾನಿಗೆ ತುತ್ತಾದ ಕೆಲ ಪ್ರದೇಶಗಳ ಫೋಟೋಗಳು ಇಲ್ಲಿದೆ ನೋಡಿ :