alex Certify ಯುಪಿ ಸಿಎಂ ಯೋಗಿಗಾಗಿ ದೇಗುಲ; ನಿತ್ಯ ನಡೆಯುತ್ತೆ ಇಲ್ಲಿ ಪೂಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಪಿ ಸಿಎಂ ಯೋಗಿಗಾಗಿ ದೇಗುಲ; ನಿತ್ಯ ನಡೆಯುತ್ತೆ ಇಲ್ಲಿ ಪೂಜೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ದೇವಾಲಯ ಒಂದು ನಿರ್ಮಾಣವಾಗಿದೆ. ಪ್ರಭಾಕರ್ ಮೌರ್ಯ ಎಂಬ ವ್ಯಕ್ತಿ ಇದನ್ನು ನಿರ್ಮಿಸಿದ್ದು, ನಿತ್ಯ ಇಲ್ಲಿ ಪೂಜೆ ಪುನಸ್ಕಾರ ನಡೆಯುತ್ತದೆ.

ಯೋಗಿ ಆದಿತ್ಯನಾಥ್ ಅವರ ಎತ್ತರದಷ್ಟೇ ಮೂರ್ತಿಯನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಕೈಯಲ್ಲಿ ಬಿಲ್ಲು ಬಾಣ ಮತ್ತು ತಲೆಯ ಹಿಂಭಾಗದಲ್ಲಿ ಪ್ರಭಾವಳಿ ರೂಪಿಸಲಾಗಿದೆ.

ರಾಮ ಜನ್ಮಭೂಮಿ ಸುಮಾರು 25 ಕಿಮೀ ದೂರದಲ್ಲಿ ಫೈಜಾಬಾದ್ – ಪ್ರಯಾಗ್ ರಾಜ್ ಹೆದ್ದಾರಿ ನಡುವಿನ ಭರತ್ ಕುಂಡ್ ಎಂಬ ಪ್ರದೇಶದಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು, ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಬಳಿಕ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...