
ಖಾರ್ಕಿವ್‌ನ ಪಿಜ್ಜೇರಿಯಾ ಮಾಲೀಕರೊಬ್ಬರು ವೈದ್ಯರು, ತುರ್ತು ಸಿಬ್ಬಂದಿ ಮತ್ತು ಸಾಮಾನ್ಯ ಜನರಿಗೆ ಆಹಾರ ಪೂರೈಸುತ್ತಿದ್ದಾರೆ. ಈ ವಿಡಿಯೋವನ್ನು ಹನ್ನಾ ಲಿಯುಬಕೋವಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಖಂಡಿತವಾಗಿಯೂ ನಿಮ್ಮ ಹೃದಯವನ್ನು ಗೆಲ್ಲೋದ್ರಲ್ಲಿ ಸಂಶಯವೇ ಇಲ್ಲ. ಪಾವ್ಲೋದ ಖಾರ್ಕಿವ್‌ನಲ್ಲಿರುವ ಪಿಜ್ಜೇರಿಯಾದ ಮಾಲೀಕರು ಸ್ವತಃ ನಗರದಾದ್ಯಂತ ಸಂಚರಿಸಿ ಪಿಜ್ಜಾ ವಿತರಿಸುತ್ತಾರೆ. ವಿದೇಶದಿಂದ ಕರೆ ಮಾಡುವ ಜನರು, ವೈದ್ಯರು, ತುರ್ತು ಸಿಬ್ಬಂದಿ ಮತ್ತು ಸಾಮಾನ್ಯ ಜನರಿಗೆ ಕೊಡಲಾಗುವ ಆಹಾರಕ್ಕಾಗಿ ಹಣವನ್ನು ಪಾವತಿಸುತ್ತಾರೆ.
ಈ ಹೃದಯಸ್ಪರ್ಶಿ ವಿಡಿಯೋ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಪಾವ್ಲೋ ಅವರ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಜೊತೆಗೆ ಕೊಡುಗೆ ನೀಡಲು ಹಣವನ್ನು ಕಳುಹಿಸುವ ಪ್ರಕ್ರಿಯೆಯ ಬಗ್ಗೆ ಇತರರು ವಿಚಾರಿಸಿದ್ದಾರೆ.