ಕೈವ್: ಉಜ್ಹೊರೊಡ್ ನ್ಯಾಷನಲ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿರುವ ಫೆಡಿರ್ ಶಾಂಡೋರ್ ಅವರು ತಮ್ಮ ತೊಡೆಯ ಮೇಲೆ ಆಕ್ರಮಣಕಾರಿ ರೈಫಲ್ ಹಿಡಿದಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
“ಸರಿ, ವಿದ್ಯಾರ್ಥಿಗಳಿಗೆ ಉಪನ್ಯಾಸಗಳು ಶಿಕ್ಷಣದ ಹಾದಿಯಲ್ಲಿ ಪ್ರಮುಖ ಮಾನದಂಡಗಳಾಗಿವೆ, ಅವುಗಳನ್ನು ತಪ್ಪಿಸಿಕೊಳ್ಳಬಾರದು. ಹಿನ್ನೆಲೆಯಲ್ಲಿ ಎಲ್ಲೋ ಶೆಲ್ ದಾಳಿಯ ಶಬ್ದಗಳು ಕಂಡುಬಂದರೆ, ಅವು ಉಪನ್ಯಾಸದ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಶಾಂಡೋರ್ ವಿಶ್ವವಿದ್ಯಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ಯುದ್ದದ ಆರಂಭವಾಗುವ ಮೊದಲ ದಿನ ಸೇನೆ ಸೇರಿದ ಉಕ್ರೇನ್ ಪ್ರಾಧ್ಯಾಪಕ, ನಾನು ಯಾವಾಗಲೂ ಡಗ್ ಔಟ್ ಬಳಿ ಉಪನ್ಯಾಸಗಳನ್ನು ನೀಡುತ್ತೇನೆ. ಈಗ ಶೆಲ್ ದಾಳಿ ನಡೆದ ಕಾರಣ ನಾನು ಡಗ್ ಔಟ್ಗೆ ಹೋಗಿ ಉಪನ್ಯಾಸವನ್ನು ಮುಂದುವರಿಸಿದೆ ಎಂದು ಹೇಳಿದರು.
ಪ್ರತಿ ಸೋಮವಾರ ಮತ್ತು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಉಪನ್ಯಾಸಗಳನ್ನು ನೀಡುತ್ತೇನೆ ಮತ್ತು ಇಲ್ಲಿಯವರೆಗೆ ಅವರು ಒಂದನ್ನು ತಪ್ಪಿಸಿಲ್ಲ. ಅವರ ಕಮಾಂಡಿಂಗ್ ಅಧಿಕಾರಿಗಳು ಅವರು ರಾತ್ರಿಯಿಡೀ ಯುದ್ಧ ಕರ್ತವ್ಯ ನಿಯೋಜನೆಗೊಳ್ಳಬಹುದು ಎಂದು ಅನುಮತಿ ನೀಡಿದ್ದಾರೆ. ಆದ್ದರಿಂದ ಬೆಳಿಗ್ಗೆ ಆನ್ಲೈನ್ ತರಗತಿಗಳನ್ನು ನಡೆಸುತ್ತೇನೆ ಎಂದು ಹೇಳಿದರು.