alex Certify ಯಾವ ರಾಶಿಗೆ ಶುಭ ಫಲ….? ಯಾರಿಗೆ ಸಂಕಷ್ಟ…..? ಇಲ್ಲಿದೆ ನೋಡಿ ಇಂದಿನ ದಿನ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ರಾಶಿಗೆ ಶುಭ ಫಲ….? ಯಾರಿಗೆ ಸಂಕಷ್ಟ…..? ಇಲ್ಲಿದೆ ನೋಡಿ ಇಂದಿನ ದಿನ ಭವಿಷ್ಯ

ಮೇಷ : ಇಂದು ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಇಂದು ಉತ್ತಮ ಪ್ರಗತಿಯನ್ನು ಕಾಣಲಿದ್ದಾರೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಚರ್ಚೆ ನಡೆಯಲಿದೆ. ಅತ್ತೆ – ಸೊಸೆ ನಡುವಿನ ಮನಸ್ತಾಪವು ಮನೆಯ ನೆಮ್ಮದಿಯನ್ನು ಹಾಳುಗೆಡವಲಿದೆ.

ವೃಷಭ : ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಜಯ ದೊರಕಲಿದೆ. ಇದರಿಂದ ವಿದ್ಯಾರ್ಥಿಗಳ ಉತ್ಸಾಹ ಇನ್ನಷ್ಟು ಹೆಚ್ಚಲಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಹಣಕಾಸಿನ ವ್ಯವಹಾರ ನಡೆಸುವಾಗ ಎಚ್ಚರಿಕೆ ಇರಲಿ.

ಮಿಥುನ : ವ್ಯಾಪಾರ – ವ್ಯವಹಾರದಲ್ಲಿ ಇಂದು ನಷ್ಟ ಅನುಭವಿಸಬೇಕಾದೀತು. ಸಾಕಷ್ಟು ಶ್ರಮದ ಬಳಿಕ ಸಂಜೆಯ ವೇಳೆಗೆ ಕೊಂಚ ಸುಧಾರಣೆ ಕಂಡುಬರಲಿದೆ. ಕಚೇರಿಯಲ್ಲಿ ಸರಿಯಾದ ಸಮಯಕ್ಕೆ ದಾಖಲೆ ಸಲ್ಲಿಸಲು ಆಗದೇ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯಿದೆ.

ಕಟಕ : ಆರ್ಥಿಕ ಸ್ಥಿತಿ ಇಂದು ಮಿಶ್ರಫಲ ನೀಡಲಿದೆ. ಹಳೆಯ ಸಾಲಗಳು ತೀರುವುದು ಕೊಂಚ ನೆಮ್ಮದಿ ತರಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣವನ್ನು ಹಾಕಿ. ಕುಟುಂಬದಲ್ಲಿ ಅನಿರೀಕ್ಷಿತ ವಿವಾದವೊಂದು ಹುಟ್ಟಿಕೊಳ್ಳಬಹುದು. ಇದು ಇಡೀ ಕುಟುಂಬದ ನೆಮ್ಮದಿಯನ್ನು ಹಾಳುಗೆಡವಲಿದೆ.

ಸಿಂಹ : ಆಸ್ತಿ ವಿಚಾರವಾಗಿ ಮನೆಯ ಸದಸ್ಯರೊಡನೆ ಮನಸ್ತಾಪ ಉಂಟಾಗಲಿದೆ. ಇದರಿಂದ ನೀವು ಮಾನಸಿಕವಾಗಿ ಒತ್ತಡಕ್ಕೆ ಸಿಲುಕುವಿರಿ. ಆದರೆ ಪೋಷಕರು ನಿಮ್ಮ ಪರ ನಿಲ್ಲುವುದರಿಂದ ನಿಮಗೆ ಆನೆ ಬಲ ಬರಲಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲಲಿದ್ದೀರಿ.

ಕನ್ಯಾ : ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಈ ದಿನ ಅತ್ಯಂತ ಶುಭಕರವಾಗಿದೆ. ಸಂಗಾತಿಯು ನಿಮ್ಮೆಲ್ಲ ಕಷ್ಟದಲ್ಲಿಯೂ ಹೆಗಲು ನೀಡಲಿದ್ದಾರೆ. ನೀವು ಉತ್ತಮ ಯಶಸ್ಸನ್ನು ಹೊಂದಲಿದ್ದಾರೆ. ಸಂಬಳ ಏರಿಕೆಯಾಗುವ ಸುದ್ದಿಯು ನಿಮ್ಮ ಕಿವಿಗೆ ಬೀಳಲಿದೆ.

ತುಲಾ : ವೃತ್ತಿ ಜೀವನವು ಅತ್ಯಂತ ನೆಮ್ಮದಿಯಿಂದ ಇರಲಿದೆ. ಕಿರಿಯ ಪುತ್ರಿಗೆ ವೈವಾಹಿಕ ಸಂಬಂಧವು ಕೂಡಿ ಬರಲಿದೆ. ವ್ಯವಹಾರದಲ್ಲಿ ನಿಮಗೆ ಆರ್ಥಿಕವಾಗಿ ಲಾಭವಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷವಿದೆ. ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಜಾಗ್ರತೆ ವಹಿಸಿ.

ವೃಶ್ಚಿಕ : ಕುಟುಂಬಕ್ಕಾಗಿ ಇಂದು ಸಾಕಷ್ಟು ಖರ್ಚು ಮಾಡಬೇಕಾದ ಸಂದರ್ಭ ಎದುರಾಗಲಿದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಚಿಕ್ಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಸಹ ಮನೆ ಮದ್ದಿನ ಮೂಲಕವೇ ಶಮನ ಮಾಡಿಕೊಳ್ಳಬಹುದು.

ಧನು : ಬಿಡುವಿಲ್ಲದ ಕೆಲಸದಿಂದಾಗಿ ಆರೋಗ್ಯದ ಕಡೆಗೆ ಗಮನ ನೀಡಲು ಸಾಧ್ಯವಾಗದೇ ಹೋಗಬಹುದು. ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ. ಇಲ್ಲವಾದಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಸಂಗಾತಿಯಿಂದ ಕೊಂಚ ಕಿರಿಕಿರಿಯಿದೆ.

ಮಕರ : ಆದಾಯ ಹೆಚ್ಚಲಿದೆ. ಇದರಿಂದ ನಿಮಗೆ ಸಂತೋಷವಾಗಲಿದೆ. ದಿನದ ಕೊನೆಯಲ್ಲಿ ಜೇಬಿಗೆ ಕತ್ತರಿ ಬೀಳಲಿದೆ. ಸಂಗಾತಿಯು ಉತ್ತಮ ಸಲಹೆ ನೀಡಲಿದ್ದಾರೆ. ಮನೆಯಲ್ಲಿ ಧಾರ್ಮಿಕ ಕಾರ್ಯವು ನಡೆಯಲಿದೆ. ಕಂಕಣ ಭಾಗ್ಯವಿದೆ.

ಕುಂಭ : ಕೌಟುಂಬಿಕ ಜೀವನದಲ್ಲಿ ನೆಮ್ಮದಿಯಿದೆ. ಆದರೆ ವೃತ್ತಿ ಜೀವನದಲ್ಲಿ ಕಿರಿಕಿರಿ ತಪ್ಪಿದ್ದಲ್ಲ. ದಾಂಪತ್ಯ ಜೀವನದಲ್ಲಿ ಸಂಬಂಧವು ಇನ್ನಷ್ಟು ಬಿಗಿಯಾಗಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಸಹೋದರರ ಜೊತೆ ವಿವಾದ ಉಂಟಾಗುವ ಸಾಧ್ಯತೆ ಇದೆ.

ಮೀನ : ಹಿರಿಯರ ಜೊತೆಗೆ ಚರ್ಚೆ ನಡೆಸಿ ಬಳಿಕ ಹಣ ಹೂಡಿಕೆ ಬಗ್ಗೆ ಯೋಚನೆ ಮಾಡಿ. ಆತುರದ ನಿರ್ಧಾರ ನಿಜಕ್ಕೂ ಒಳ್ಳೆಯದಲ್ಲ. ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತೀರಿ. ತಾಳ್ಮೆಯಿಂದಿರಿ. ಕೋಪದ ಕೈಗೆ ಬುದ್ಧಿ ನೀಡಬೇಡಿ. ಕೋಪದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದು ನೆನಪಿರಲಿ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...