ದೇಶದ ಮೊದಲ ಬುಲೆಟ್ ರೈಲು ಯಾವಾಗ ಹಳಿಯೇರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಕಾಮಗಾರಿ ಯಾವ ಹಂತ ತಲುಪಿದೆ ಅನ್ನೋ ಪ್ರಶ್ನೆಯೂ ಸಹಜ. ಸದ್ಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾಮಗಾರಿ ವೇಗವಾಗಿ ನಡೆಯುತ್ತಿದೆ.
ಶೀಘ್ರದಲ್ಲೇ ಮಾರ್ಗದಲ್ಲಿ ಬುಲೆಟ್ ರೈಲು ಓಡುವುದನ್ನು ಕಾಣಬಹುದು. ಅಹಮದಾಬಾದ್‌ನ ಸಬರಮತಿಯಲ್ಲಿ ಬಹು ಮಾದರಿ ಸಾರಿಗೆ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ.
ಅರೆ-ಹೈಸ್ಪೀಡ್ ರೈಲು ಕಾರಿಡಾರ್‌ಗಾಗಿ 180 ಕಿಲೋಮೀಟರ್ ಅಡಿಪಾಯದ ಕೆಲಸ ಮತ್ತು 50 ಕಿಲೋಮೀಟರ್ ನದಿ ಸೇತುವೆಯ ನಿರ್ಮಾಣ ಪೂರ್ಣಗೊಂಡಿದೆ. ಮಾಹಿತಿಯ ಪ್ರಕಾರ ಪ್ರಸ್ತುತ ವೇಗವನ್ನು ಗಮನಿಸಿದ್ರೆ 2026 ರ ವೇಳೆಗೆ ಭಾರತದಲ್ಲಿ ಬುಲೆಟ್ ರೈಲು ಹಳಿಯೇರಲಿದೆ. ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ರೈಲು ಓಡಿಸಲು ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣ ನಡೆಯುತ್ತಿದೆ.
50 ಕಿಲೋಮೀಟರ್ ಅಗಲದ ಸೇತುವೆಗೆ ಕಬ್ಬಿಣದ ಗರ್ಡರ್‌ಗಳನ್ನು ಹಾಕುವ ಮೂಲಕ ದೊಡ್ಡ ಕಾಮಗಾರಿಯನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ನದಿಗಳ ಮೇಲೆ ಸುಮಾರು 50.16 ಕಿ.ಮೀ ಸೇತುವೆಗಳ ನಿರ್ಮಾಣ ಪೂರ್ಣಗೊಂಡಿದೆ. ಇದು ವಡೋದರಾ ಬಳಿ 9.1 ಕಿಮೀ ಸೇತುವೆಯ ನಿರ್ಮಾಣ ಮತ್ತು ಇತರ ಹಲವು ಸ್ಥಳಗಳಲ್ಲಿ 41.06 ಕಿಮೀ ನಿರ್ಮಾಣವನ್ನು ಒಳಗೊಂಡಿದೆ. 285 ಕಿಲೋಮೀಟರ್ ಉದ್ದದ ಪೈಪ್‌ಲೈನ್ ಕಾಮಗಾರಿ ಕೂಡ ಪೂರ್ಣಗೊಂಡಿದೆ.
182.4 ಕಿ.ಮೀ. ಪಿಲ್ಲರ್‌ಗಳು, 215.9 ಕಿ.ಮೀ. ಅಡಿಪಾಯ ಕಾಮಗಾರಿ ಮುಕ್ತಾಯವಾಗಿದೆ. 75.3 ಕಿಲೋಮೀಟರ್‌ಗಳ ಮಾರ್ಗವನ್ನು ಸಂಪರ್ಕಿಸಲು ಸುಮಾರು 1,882 ಗರ್ಡರ್‌ಗಳನ್ನು ಅಳವಡಿಸಲಾಗಿದೆ. ಪ್ರಸ್ತುತ, ದಾದರ್ ನಗರ ಹವೇಲಿ ಮತ್ತು ಗುಜರಾತ್‌ನ 8 ಜಿಲ್ಲೆಗಳ ಮೂಲಕ ಹಾದು ಹೋಗುವ ರೈಲು ಮಾರ್ಗದ ನಿರ್ಮಾಣವು ಭರದಿಂದ ಸಾಗುತ್ತಿದೆ. ಸಬರಮತಿಯಿಂದ ವಾಪಿ ನಡುವಿನ 8 ರೈಲು ನಿಲ್ದಾಣಗಳ ಕಾಮಗಾರಿ ವಿವಿಧ ಹಂತಗಳಲ್ಲಿ ನಡೆಯುತ್ತಿದೆ.
ಮತ್ತೊಂದೆಡೆ, ಆನಂದ್‌ನಲ್ಲಿ 150 ಮೀಟರ್, ಸೂರತ್‌ನಲ್ಲಿ 250 ಮೀಟರ್, ಬೇಲಿಮೋರಾದಲ್ಲಿ 50 ಮೀಟರ್ ಹೈಸ್ಪೀಡ್ ರೈಲ್ವೆ ಸ್ಲ್ಯಾಬ್ ನಿರ್ಮಿಸಲಾಗಿದೆ. ಆನಂದ್/ನಾಡಿಯಾಡ್ ಮುಂಬೈ ಮತ್ತು ಅಹಮದಾಬಾದ್ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್‌ನ ಮೊದಲ ನಿಲ್ದಾಣವಾಗಿದೆ.
ಇಲ್ಲಿ ನಿಲ್ದಾಣದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಇದಲ್ಲದೆ, ಸೂರತ್‌ನಲ್ಲಿ 300 ಮೀಟರ್ ಸ್ಲ್ಯಾಬ್ ಮತ್ತು ಅಹಮದಾಬಾದ್‌ನ ಮೈನರ್ ರಸ್ತೆಯಲ್ಲಿ 60 ಮೀಟರ್ ಲೆವೆಲ್ ಸ್ಲ್ಯಾಬ್‌ನ ನಿರ್ಮಾಣ ಪೂರ್ಣಗೊಂಡಿದೆ. ಪ್ರಸ್ತುತ ಸಬರಮತಿ, ಮಾಹಿ, ತಾಪಿ ಮತ್ತು ನರ್ಮದಾ ನದಿಗಳ ಸೇತುವೆಗಳ ಕಾಮಗಾರಿ ನಡೆಯುತ್ತಿದೆ.