ರಾಜ್ಯದಲ್ಲಿ ಕೆಲವು ದಿನಗಳಿಂದ ಹಿಜಾಬ್, ಆಜಾನ್, ಹಲಾಲ್ ವಿವಾದ ನಡೆಯುತ್ತಿದ್ದು, ಇದರ ಜೊತೆಗೆ ಈಗ ಅಕ್ಷಯ ತೃತೀಯದಂದು ಮುಸ್ಲಿಂ ಅಂಗಡಿಯಿಂದ ಹಿಂದೂಗಳು ಚಿನ್ನ ಖರೀದಿಸದಂತೆ ಶ್ರೀರಾಮ ಸೇನೆ ಸೇರಿದಂತೆ ಹಿಂದೂ ಸಂಘಟನೆಗಳು ಅಭಿಯಾನ ನಡೆಸುತ್ತಿವೆ.
ಅದರಲ್ಲೂ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈ ಎಲ್ಲ ವಿಷಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದು, ಜೊತೆಗೆ ಮೇ 9 ರ ವೇಳೆಗೆ ಆಜಾನ್ ನಿಲ್ಲಿಸದಿದ್ದರೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಆರಂಭಿಸಲಾಗುತ್ತದೆ ಎಂದಿದ್ದಾರೆ.
ಇವರ ಮಧ್ಯೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್, ಯಾವನ್ರೀ ಅವ ಪ್ರಮೋದ್ ಮುತಾಲಿಕ್ ? ಪಂಚಾಯಿತಿಗೋ, ಮುನ್ಸಿಪಾಲ್ಟಿಗೋ ಆಯ್ಕೆಯಾದ ಅನುಭವ ಇದೆಯಾ ? ಇಂಥವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಆಗುವುದಿಲ್ಲ ಎಂದರೆ ಏನರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.