ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಕಷ್ಟಗಳ ಮೇಲೆ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಐಟಿ, ಜಾರಿ ನಿರ್ದೇಶನಾಲಯದ ಬಳಿಕ ಇದೀಗ ಸಿಬಿಐ, ಡಿಕೆಶಿ ಅವರಿಗೆ ಸೇರಿದ ಮನೆಗಳಲ್ಲಿ ಪರಿಶೀಲನೆ ನಡೆಸಿದೆ
ಕನಕಪುರ, ದೊಡ್ಡಾಲಹಳ್ಳಿ, ಸಂತೆ ಕೋಡಿಹಳ್ಳಿಯಲ್ಲಿ ಇರುವ ಡಿಕೆಶಿ ಅವರಿಗೆ ಸೇರಿದ ಮನೆ ಹಾಗೂ ಆಸ್ತಿಪಾಸ್ತಿ ಕುರಿತಂತೆ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಇನ್ನು ಈ ಕುರಿತಂತೆ ಮೈಸೂರಿನಲ್ಲಿ ಮಾತನಾಡಿರುವ ಡಿ.ಕೆ. ಶಿವಕುಮಾರ್, ಯಾರ ಮೇಲೆ ಜಾಸ್ತಿ ಪ್ರೀತಿ ಇರುತ್ತೋ ಅವರ ಮೇಲೆ ದಾಳಿ ಮಾಡುತ್ತಾರೆ ಎಂದು ಸಿಬಿಐ ಅಧಿಕಾರಿಗಳ ಪರಿಶೀಲನೆ ಕುರಿತು ವ್ಯಂಗ್ಯವಾಡಿದ್ದಾರೆ.