ಯಾರೂ ಇರದ ವೇದಿಕೆಯಲ್ಲಿ ಶೇಕ್ ಹ್ಯಾಂಡ್ ಮಾಡಲು ಹೋಗಿ ತಬ್ಬಿಬ್ಬಾದ ಅಮೆರಿಕಾ ಅಧ್ಯಕ್ಷ..! 16-04-2022 6:32AM IST / No Comments / Posted In: Latest News, Live News, International ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಸುಖಾಸುಮ್ಮನೆ ಕೈಕುಲುಕಲು ಪ್ರಯತ್ನಿಸಿದ ದೃಶ್ಯ ಇದಾಗಿದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ತಮ್ಮ ಭಾಷಣವನ್ನು ಮುಗಿಸಿದ ನಂತರ ಶೇಕ್ ಹ್ಯಾಂಡ್ ಮಾಡಲು ಮುಂದಾಗಿದ್ದಾರೆ. ಆದರೆ, ಅಲ್ಲಿ ಯಾರೂ ಇರಲಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು ಗೊಂದಲಕ್ಕೀಡಾಗಿದ್ದಾರೆ. ಅಧ್ಯಕ್ಷರು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಅವರು ಊಹಿಸಲು ಸಾಧ್ಯವಾಗದ ಕಾರಣ ಘಟನೆಯು ಉಲ್ಲಾಸಕರವಾಗಿದೆ. ಬಿಡೆನ್ ಕೂಡ ಅತ್ತಿತ್ತ ನೋಡಿ ಸುತ್ತಾಡಿದ ನಂತರ ಗೊಂದಲಕ್ಕೊಳಗಾಗಿದ್ದಾರೆ. ಬಿಡೆನ್ ಉತ್ತರ ಕೆರೊಲಿನಾದ ಗ್ರೀನ್ಸ್‌ಬೊರೊಗೆ ಭೇಟಿ ನೀಡಿದ್ದರು. ಉತ್ತರ ಕೆರೊಲಿನಾದ ಎ & ಟಿ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸುಮಾರು 40 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ಬಿಡೆನ್ ತನ್ನ ಭಾಷಣವನ್ನು ಮುಗಿಸಿದ ನಂತರ ವೇದಿಕೆಯ ಬಲಭಾಗದ ಕಡೆಗೆ ತಿರುಗಿದ್ದಾರೆ. ನಂತರ ಕೈಕುಲುಕಲು ಮುಂದಾಗಿದ್ದಾರೆ. ಆದರೆ, ವೇದಿಕೆಯಲ್ಲಿ ಬೇರೆ ಯಾರೂ ಇರಲಿಲ್ಲ. ಅಧ್ಯಕ್ಷರ ಭಾಷಣ ಮುಗಿದ ಬಳಿಕ ಸಭಿಕರೆಲ್ಲರೂ ಚಪ್ಪಾಳೆ ತಟ್ಟಿದ್ದಾರೆ. ಆದರೆ, ಯಾರೂ ಅಧ್ಯಕ್ಷರ ಜೊತೆ ಶೇಕ್ ಹ್ಯಾಂಡ್ ಮಾಡುವ ಗೋಜಿಗೆ ಹೋಗಿಲ್ಲ ಎಂದು ತೋರುತ್ತದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ಒಂದೇ ದಿನದಲ್ಲಿ 6 ಮಿಲಿಯನ್ ಜನರು ವೀಕ್ಷಿಸಿದ್ದಾರೆ. After Biden finished his speech, he turned around and tried to shake hands with thin air and then wandered around looking confused pic.twitter.com/ZN00TLdUUo — Washington Free Beacon (@FreeBeacon) April 14, 2022