ರಾಜ್ಯದಲ್ಲಿ ಕೆಲವು ದಿನಗಳಿಂದ ಹಿಜಾಬ್, ಹಲಾಲ್ ವಿವಾದ ನಡೆಯುತ್ತಿದ್ದು, ಇದರ ಮಧ್ಯೆ ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಮುಸ್ಲಿಂ ವರ್ತಕರ ಬದಲು ಹಿಂದೂ ವರ್ತಕರ ಬಳಿಯೇ ಖರೀದಿ ಮಾಡಬೇಕೆಂಬ ಅಭಿಯಾನ ನಡೆಯುತ್ತಿತ್ತು.
ಇದು ಈಗ ಮೇ 3ರಂದು ನಡೆಯಲಿರುವ ಅಕ್ಷಯ ತೃತೀಯಕ್ಕೂ ವ್ಯಾಪಿಸಿದ್ದು, ಈ ಸಂದರ್ಭದಲ್ಲಿ ಮುಸ್ಲಿಂ ಚಿನ್ನ ವರ್ತಕರ ಬಳಿ ಖರೀದಿಸದೆ ಹಿಂದೂ ವರ್ತಕರ ಬಳಿಯೇ ಚಿನ್ನ ಖರೀದಿಸಬೇಕೆಂಬ ಅಭಿಯಾನ ಹಿಂದೂ ಸಂಘಟನೆಗಳಿಂದ ಆರಂಭವಾಗಿದೆ.
ಶಿವಮೊಗ್ಗ ಡಿಸಿಸಿ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಕುರಿತಂತೆ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಉಮೇಶ್ ಕತ್ತಿ, ಯಾರು ಒಳ್ಳೆ ರೇಟ್ ಹಾಗೂ ಒಳ್ಳೆಯದನ್ನು ಕೊಡ್ತಾರೋ ಜನ ಅವರ ಬಳಿಯೇ ಖರೀದಿಸುತ್ತಾರೆ ಎಂದು ಹೇಳಿದ್ದಾರೆ.