alex Certify ಯಾತ್ರಾರ್ಥಿಗಳನ್ನು ಸೆಳೆಯುವ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ‘ರಾಮೇಶ್ವರಂ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾತ್ರಾರ್ಥಿಗಳನ್ನು ಸೆಳೆಯುವ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ‘ರಾಮೇಶ್ವರಂ’

ತಮಿಳುನಾಡಿನ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವಾಲಯಗಳು, ಕಡಲ ತೀರ.  ಪ್ರವಾಸಿಗರು, ಯಾತ್ರಾರ್ಥಿಗಳನ್ನು ಸೆಳೆಯುತ್ತವೆ.

ರಾಮೇಶ್ವರಂನ  ದೇವಾಲಯಗಳು ಕಲಾತ್ಮಕವಾಗಿದ್ದು, ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು, ಸುಂದರ ಕಡಲ ತೀರದಲ್ಲಿ ವಿಹರಿಸಬಹುದಾಗಿದೆ.  ರಾಮೇಶ್ವರಂನ ಶ್ರೀರಾಮನಾಥ ದೇವಾಲಯ 12 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು,  ಈ  ಅವಧಿಯಲ್ಲಿ ಆಡಳಿತದಲ್ಲಿದ್ದ ರಾಜರು ದೇವಾಲಯ ನಿರ್ಮಣಕ್ಕೆ ಒತ್ತು ನೀಡಿದ್ದರು.  ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯದ ಪ್ರಾಂಗಣ ವಿಶಾಲವಾಗಿದೆ.  ಪ್ರವೇಶ ದ್ವಾರದ ಅಗಲ 6 ಮೀಟರ್,  ಎತ್ತರ 9 ಮೀಟರ್ ಇದೆ.

ಸುಮಾರು 6 ಹೆಕ್ಟೇರ್ ಪ್ರದೇಶದಲ್ಲಿ ದೇವಾಲಯ ನಿರ್ಮಾಣವಾಗಿದೆ. ದೇವಾಲಯದ ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 197 ಮೀಟರ್,  ಉತ್ತರದಿಂದ ದಕ್ಷಿಣಕ್ಕೆ 133 ಮೀಟರ್ ಉದ್ದವಿದೆ. ದೇವಾಲಯದ ಕಂಬಗಳ ಕಲಾತ್ಮಕ ಕೆತ್ತನೆ ನೋಡುಗರನ್ನು ಸೆಳೆಯುತ್ತದೆ. ರಾಮನಾಥ ಸ್ವಾಮಿ ದೇವಾಲಯದ ಸಮೀಪದಲ್ಲಿ ಅಗ್ನಿತೀರ್ಥವಿದೆ. ರಾಮೇಶ್ವರಂನಿಂದ ಸುಮಾರು 18 ಕಿಲೋ ಮೀಟರ್ ದೂರದಲ್ಲಿ ಧನುಷ್ಕೋಟಿ ಇದ್ದು,  ಇಲ್ಲಿ  ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಆಂಜನೇಯ ವಿಗ್ರಹಗಳನ್ನು ನೋಡಬಹುದಾಗಿದೆ.

ರಾಮನಾಥಪುರದಲ್ಲಿ ರಾಮಲಿಂಗ ವಿಲಾಸ ಅರಮನೆ ಇದೆ. ರಾಮೇಶ್ವರಂನಿಂದ ಸುಮಾರು 14 ಕಿಲೋ ಮೀಟರ್ ದೂರದಲ್ಲಿರುವ ತಿರುಪಳನಿಯಲ್ಲಿ ವಿಷ್ಣು ದೇವಾಲಯವಿದ್ದು,  ಇಲ್ಲಿನ ಕಲಾತ್ಮಕ  ಕೆತ್ತನೆ  ಕಣ್ಮನ ಸೆಳೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...