ಕೆಜಿಎಫ್ ಸ್ಟಾರ್ ಯಶ್ ತಮ್ಮ 36ನೇ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ತಮ್ಮ ಜನ್ಮ ದಿನವನ್ನು ನಟ ಯಶ್ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಾದ ಐರಾ ಹಾಗೂ ಯಥರ್ವ ಜೊತೆ ಆಚರಿಸಿಕೊಂಡಿದ್ದಾರೆ.
ಮಧ್ಯರಾತ್ರಿ 12 ಗಂಟೆಗೆ ನಟಿ ರಾಧಿಕಾ ಪಂಡಿತ್ ತಮ್ಮ ಪತಿಗೆ ಕೆಜಿಎಫ್ ಥೀಮ್ನ ಕೇಕ್ನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಕ್ಕಳು ಕೂಡ ತಂದೆಗೆ ಕೇಕ್ ನೀಡಿದ್ದಾರೆ. ಇದು ಮಾತ್ರವಲ್ಲದೇ ಯಶ್ಗೆ ಮಕ್ಕಳು ಉಡುಗೊರೆಯನ್ನೂ ನೀಡಿದ್ದಾರೆ.
ಯಶ್ ಜನ್ಮ ದಿನದ ಪ್ರಯುಕ್ತ ‘ಕೆಜಿಎಫ್ : ಚ್ಯಾಪ್ಟರ್2’ನ ಹೊಸ ಪೋಸ್ಟರ್ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್ನಲ್ಲಿ ಯಶ್ರ ಲುಕ್ ಸಖತ್ ರಗಡ್ ಆಗಿದೆ.
ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಗ್ಯಾಂಗ್ಸ್ಟರ್ ಥ್ರಿಲ್ಲರ್ ಮೂವಿಯಲ್ಲಿ ಯಶ್ ರಾಕಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಮಧ್ಯರಾತ್ರಿ ನಡೆದ ಜನ್ಮದಿನದ ಸಂಭ್ರಮದ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ರಾಧಿಕಾ ತಮ್ಮ ಪತಿಗೆ ಕೆಜಿಎಫ್ ಮಾದರಿಯ ಕೇಕ್ ಗಿಫ್ಟ್ ಆಗಿ ನೀಡಿದರೆ ಮಕ್ಕಳು ಹಣ್ಣುಗಳಿಂದ ತುಂಬಿದ ಕೇಕ್ನ್ನು ತಂದೆಗೆ ನೀಡಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2 ಸಿನಿಮಾ ಇದೇ ವರ್ಷದ ಏಪ್ರಿಲ್ 14ರಂದು ತೆರೆಗೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. ಕೊರೊನಾ ವೈರಸ್ನಿಂದಾಗಿ ಸಿನಿಮಾ ಪ್ರೊಡಕ್ಷನ್ ಅನೇಕ ಬಾರಿ ಮುಂದೂಡಿಕೆಯಾಗಿದೆ.
https://twitter.com/prashanth_neel/status/1479656605947998208