ಸೋಲನ್ನು ಯಾರೂ ಇಷ್ಟಪಡಲಾರರು. ಗೆಲುವಿಗಾಗಿ ಹಂಬಲಿಸುವವರೇ ಜಾಸ್ತಿ. ಆದರೆ, ಗುರಿ ತಲುಪುವ ದಾರಿಯಲ್ಲಿ ಸ್ವಲ್ಪ ಏರುಪೇರಾದರೂ ಕೆಲವರು ಹಿಂದಡಿ ಇಡುತ್ತಾರೆ. ಸೋಲಿಂದ ಹತಾಶರಾಗುತ್ತಾರೆ. ಅದರಿಂದ ನಿಮ್ಮ ಸಾಧನೆ ಈಡೇರುವುದಿಲ್ಲ. ನೀವು ಇನ್ನಷ್ಟು ಕುಸಿಯುತ್ತೀರಿ.
ನಿಮ್ಮ ಗುರಿ ತಲುಪುವ ತನಕ ಮತ್ತೆ, ಮತ್ತೆ ಪ್ರಯತ್ನಿಸುತ್ತೇನೆ ಎಂಬ ಮನೋಭಾವ ಬೆಳೆಸಿಕೊಳ್ಳಿ ಒಂದೇ ಸೋಲಿಗೆ, ಅಥವಾ 2 ನೇ ಸಲ ಸೋತಾಗಲೂ ಎಲ್ಲವೂ ಮುಗಿದು ಹೋಯ್ತು ಎಂದು ಭಾವಿಸಬೇಡಿ. ನಿಮ್ಮ ಗುರಿ ತಲುಪಲು ಇನ್ನೊಂದು ಅವಕಾಶ ಸಿಕ್ಕಿದೆ ಎಂದುಕೊಳ್ಳಿ.
ಗುರಿ ತಲುಪುವ ತನಕ ಕ್ರಿಯಾಶೀಲರಾಗಿ ಪ್ರಯತ್ನಿಸಿ. ಸೋತೆನೆಂದು ಕೈಚೆಲ್ಲಿ ಕುಳಿತರೆ, ನೀವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುವುದೇ ಇಲ್ಲ.
Breaking: ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ ನ್ಯೂಜಿಲೆಂಡ್ ಆಟಗಾರ ಅಜಾಜ್ ಪಟೇಲ್..!
ಯಶಸ್ಸಿನ ದಾರಿಯನ್ನು ಆಯ್ದುಕೊಳ್ಳುವುದು ನಿಮಗೆ ಬಿಟ್ಟ ವಿಚಾರವೇ. ನಿಮ್ಮ ಗುರಿ, ಸಾಧನೆ, ಸಾಗಬೇಕಾದ ದಾರಿಯ ಬಗ್ಗೆ ನಿಮಗೆ ಸ್ಪಷ್ಟವಾಗಿರಬೇಕು. ಸರಿಯಾದ ದಾರಿಯಲ್ಲಿ ಮುನ್ನಡೆಯಬೇಕು.
ಗೆಲುವನ್ನು ಪಡೆಯಲು ತಾಳ್ಮೆ ಮುಖ್ಯ. ಜೊತೆಗೆ ಶ್ರಮ, ಪೂರ್ವ ತಯಾರಿಯೂ ಇರಬೇಕು. ಆರಂಭದಲ್ಲಿಯೇ ನನ್ನಿಂದಾಗದು ಎಂದುಕೊಂಡರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಒಳ್ಳೆಯ ಮನಸ್ಸಿನಿಂದ ನಿಮ್ಮ ಕೆಲಸವನ್ನು ಆರಂಭಿಸಿ. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ. ನಿರಂತರ ಪ್ರಯತ್ನವಿರಲಿ. ಯಶಸ್ಸು ನಿಮ್ಮದಾಗುತ್ತದೆ.