![](https://kannadadunia.com/wp-content/uploads/2022/06/432abd66-e5bf-495c-960f-887e1e4c27a5.jpg)
ಮಾನವ ಜೀವನದಲ್ಲಿ ಸಮಸ್ಯೆ ಸಾಮಾನ್ಯ. ಕೆಲವು ಸರಳ ಉಪಾಯಗಳಿಂದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಗೋಮತಿ ಚಕ್ರಕ್ಕೆ ಮಹತ್ವದ ಸ್ಥಾನವಿದೆ. ಗೋಮತಿ ಚಕ್ರದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಗೋಮತಿ ನದಿಯಲ್ಲಿ ಸಿಗುವ ಕಡಿಮೆ ಬೆಲೆಯ ಕಲ್ಲಾಗಿದೆ. ಅನೇಕ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ.
ಗೋಮತಿ ಚಕ್ರವನ್ನು ಕಪಾಟಿನಲ್ಲಿಡುವುದ್ರಿಂದ ಆರ್ಥಿಕ ವೃದ್ಧಿಯಾಗುತ್ತದೆ.
ಗೋಮತಿ ಚಕ್ರವನ್ನು ತಾಯಿ ಲಕ್ಷ್ಮಿ ದೇವಿ ಪಾದದಡಿ ಇಟ್ಟು ಪೂಜೆ ಮಾಡುವುದ್ರಿಂದಲೂ ಧನ ವೃದ್ಧಿಯಾಗುತ್ತದೆ.
ಮಗುವಿಗೆ ಪದೇ ಪದೇ ದೃಷ್ಟಿ ತಾಕುತ್ತಿದ್ದರೆ 11 ಗೋಮತಿ ಚಕ್ರವನ್ನು ಪ್ರದಕ್ಷಿಣೆ ಮಾಡಿ ಮೂರು ರಸ್ತೆ ಸೇರುವ ಜಾಗಕ್ಕೆ ಎಸೆದು ಹಿಂತಿರುಗಿ ನೋಡದೆ ವಾಪಸ್ ಬನ್ನಿ.
ನಿರಂತರವಾಗಿ ಹಣ ವ್ಯಯವಾಗುತ್ತಿದ್ದರೆ 11 ಗೋಮತಿ ಚಕ್ರಕ್ಕೆ ಅರಿಶಿನ ಹಾಕಿ ಹಳದಿ ಬಟ್ಟೆಯಲ್ಲಿ ಕಟ್ಟಿ ಮನೆ ತುಂಬ ತೋರಿಸಿ ನಂತ್ರ ನದಿಗೆ ಎಸೆಯಿರಿ.
ರಾತ್ರಿ ಮಗು ಭಯಗೊಂಡು ಏಳುತ್ತಿದ್ದರೆ ಸಣ್ಣ ಗೋಮತಿ ಚಕ್ರವನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ ಯಂತ್ರ ರೂಪದಲ್ಲಿ ಮಾಡಿ ಮಗುವಿನ ಕುತ್ತಿಗೆಗೆ ಕಟ್ಟಿ.